ರಂಜಾನ್ ನೆಮ್ಮದಿ, ಸಂತೋಷ ತರಲಿ

ರಂಜಾನ್ ನೆಮ್ಮದಿ, ಸಂತೋಷ ತರಲಿ

ಬೆಂಗಳೂರು : “ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯ ಪ್ರತೀಕ ರಂಜಾನ್. ಹಬ್ಬವು ಬದುಕಿನಲ್ಲಿ ನೆಮ್ಮದಿ, ಸಂತೋಷ ತರಲಿ. ರಂಜಾನ್ ತಿಂಗಳಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಮನೆಯಲ್ಲೇ ಪ್ರಾರ್ಥನೆ ನಡೆಸಿ, ಮುನ್ನೆಚ್ಚರಿಕೆ ವಹಿಸಿ ಸಹಕರಿಸಿದ ಎಲ್ಲ ಮುಸಲ್ಮಾನ ಬಂಧುಗಳಿಗೆ ಅಭಿನಂದನೆಗಳು,” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ರಂಜಾನ್ ಹಬ್ಬ. ತಿಂಗಳು ಉಪವಾಸ ಇಂದಿಗೆ ಕೊನೆಗೊಳ್ಳುತ್ತಿದೆ. ಗಣ್ಯಾತಿ ಗಣ್ಯರು ಶುಭಕೋರಿದ್ದಾರೆ. ಸಿಎಂ ಬಿಎಸ್ ವೈ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಶುಭಾಶಯ ಸಂದೇಶ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಮುಸ್ಲಿಮರಿಗೆ ಸಂದೇಶ ರವಾನೆ ಮಾಡಿದ್ದಾರೆ. ‘ಮನುಷ್ಯನನ್ನು ಎಲ್ಲಾ ವಿಧವಾದ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಶುದ್ಧಿಗೊಳಿಸುವ ಪವಿತ್ರ ರಂಜಾನ್ ಹಬ್ಬ ಶುಭತರಲಿ. ರಂಜಾನ್ ಎಂದರೆ ಕೇವಲ ಉಪವಾಸ ಮಾತ್ರವಲ್ಲ. ಅರ್ಹರಿಗೆ, ಅಗತ್ಯವಿರುವವರಿಗೆ ದಾನ, ಧರ್ಮ ಮಾಡಿ ಮೂಲಕ ಭಗವಂತನನ್ನು ಸಂಪ್ರೀತಗೊಳಿಸುವುದಾಗಿದೆ.

Related