ರಾಮಭಕ್ತಿ ಮೆರೆದ ಮುಸ್ಲಿಂ ವ್ಯಕ್ತಿ!

ರಾಮಭಕ್ತಿ ಮೆರೆದ ಮುಸ್ಲಿಂ ವ್ಯಕ್ತಿ!

ಶ್ರೀನಗರ: ಅಯೋದ್ಯ ರಾಮ ಮಂದಿರ ಉದ್ಘಾಟಗೆಂದು ಪಾಕ್‌ ನ ಮುಸ್ಲಿಂ ವ್ಯಕ್ತಿ ಒಬ್ಬರು ವಿಶೇಷ ನೀರು ಕಳಿಸುವ ಮೂಲಕ ರಾಮಭಕ್ತಿ ಮೆರೆದಿದ್ದಾರೆ.

ಹೌದು, ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆಂದು ರಾಮಭಕ್ತರು ದೇಶ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ರಾಮನ ಉಡುಗೊರೆ ನೀಡುತ್ತಿದ್ದಾರೆ. ಇನ್ನು ಇದರ ಜೊತೆಗೆ ಪಾಕ್ ಮುಸ್ಲಿಂ ವ್ಯಕ್ತಿ ಒಬ್ಬರು ರಾಮನಿಗೆಂದು ವಿಶೇಷ ನೀರು ನೀಡುವ ಮೂಲಕ ರಾಮನ ಮೇಲಿರುವ ಭಕ್ತಿಯನ್ನು ಮೆರೆದಿದ್ದಾರೆ.

ಯೆಸ್…‌ ರಾಮನಿಗೆ ಕೇವಲ ಹಿಂದೂ ಜನಗಳು ಮಾತ್ರ ಭಕ್ತರಲ್ಲ. ಎಲ್ಲಾ ಜಾತಿಯ ಭಕ್ತರು ರಾಮನಾಗಿದ್ದಾರೆ. ಮುಸ್ಲಿಂ ವ್ಯಕ್ತಿಯೊಬ್ಬರು ಪಾಕ್ ಆಕ್ರಮಿತ ಕಾಶ್ಮೀರದ ಶಾರದಾ ಪೀಠದ ಕುಂಡದಿಂದ ಪವಿತ್ರ ನೀರನ್ನು ಸಂಗ್ರಹಿಸಿ ಬ್ರಿಟನ್ ಮೂಲಕ ಭಾರತಕ್ಕೆ ಕಳುಹಿಸಿದ್ದು, ಈ ಪವಿತ್ರ ನೀರನ್ನು ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ನಡೆಯುವ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆ ಬಳಸಲು ಮನವಿ ಮಾಡಿದ್ದಾರೆ.

2019 ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯಾದ ಬಾಲಾಕೋಟ್ ವೈಮಾನಿಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ನೇರ ಕೊಡುಕೊಳ್ಳುವಿಕೆ ನಿಂತಿದೆ. ಈ ಹಿನ್ನೆಲೆ ಪಾಕ್ ಆಕ್ರಮಿತ ಕಾಶ್ಮೀರದ ಶಾರದಾ ಪೀಠದ ಕುಂಡದ ಪವಿತ್ರ ನೀರನ್ನು ಬ್ರಿಟನ್ ಮೂಲಕ ಭಾರತಕ್ಕೆ ಕಳುಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೇವ್ ಶಾರದಾ ಸಮಿತಿ ಕಾಶ್ಮೀರ (SSCK) ಸಂಸ್ಥಾಪಕ ರವೀಂದರ್ ಪಂಡಿತ್ ಅವರು, ಬಾಲಾಕೋಟ್‌ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಶಾರದಾ ಪೀಠದ ಕುಂಡದಿಂದ ಪವಿತ್ರ ನೀರನ್ನು ಬ್ರಿಟನ್‌ ಮೂಲಕ ಕಳುಹಿಸಲಾಗಿದೆ ಎಂದರು.

 

Related