ಇಂದಿರಾ ಕ್ಯಾಂಟೀನ್ ಬಗ್ಗೆ ಸಾರ್ವಜನಿಕರ ಅಸಮಾಧಾನ

ಇಂದಿರಾ ಕ್ಯಾಂಟೀನ್ ಬಗ್ಗೆ ಸಾರ್ವಜನಿಕರ ಅಸಮಾಧಾನ

ಬೆಂಗಳೂರು: ಬೆಂಗಳೂರಿನಗದಲ್ಲಿ ನಗರದಲ್ಲಿ ಆಟೋ ಚಾಲಕರಿಂದ ಹಿಡಿದು ಕೂಲಿ ಕಾರ್ಮಿಕರು ಸೇರಿದಂತೆ ಹಲವಾರು ಜನರು ಇಂದಿರಾ ಕ್ಯಾಂಟೀನ್ ಆಹಾರವನ್ನು ಪ್ರತಿನಿತ್ಯ ಸೇವಿಸುತ್ತಾರೆ. ಈ ಇಂದಿರಾ ಕ್ಯಾಂಟೀನ್ ನಲ್ಲಿ ಇತ್ತೀಚಿಗೆ ಕಳಪೆ ಮಟ್ಟದ ಆಹಾರವನ್ನು ಪೂರೈಸುತ್ತಿದ್ದಾರೆ ಆದ್ದರಿಂದ ಸಾರ್ವಜನಿಕರು ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಇಂದಿರಾ ಕ್ಯಾಂಟೀನ್ ಮುಚ್ಚಲಾಯಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂದಿರಾ ಕ್ಯಾಂಟೀನ್ ಮರು ಪ್ರಾರಂಭ ಮಾಡಿದೆ.

ಇಂದಿರಾ ಕ್ಯಾಂಟೀನ್ ಊಟದ ಬಗ್ಗೆ ಇತ್ತೀಚೆಗೆ ಬರುವ ಊಟದಲ್ಲಿ ರುಚಿಯೇ ಇಲ್ಲ, ಕ್ವಾಲಿಟಿಯೂ ಇಲ್ಲ. ಮುಂಚೆ ಹಲವು ಬಗೆಯ ತಿಂಡಿ ತರುಸುತ್ತಿದ್ರು. ಈಗ ಬೆಳ್ಳಗ್ಗಿನ ತಿಂಡಿಗೆ ಫಲಾವ್ ಬಿಟ್ರೆ ಇನ್ನೇನು ಬರೋದೆ ಇಲ್ಲ. ಅನ್ನ ಸರಿಯಾಗಿ ಬೆಂದಿರೋದೆ ಇಲ್ಲ. ಸಂಬಾರ್ ರುಚಿಯು ಇರೋದಿಲ್ಲ. ಸರ್ಕಾರ ಇಂದಿರಾ ಕ್ಯಾಂಟೀನ್ ಗಳನ್ನ ಕೊಡುವುದಕ್ಕಾಗಿಯೇ ಸಾಕಷ್ಟು ಹಣ ಖರ್ಚು ಮಾಡುತ್ತೆ. ಒಳ್ಳೆಯ ಕ್ವಾಲಿಟಿಯ ಊಟ ಕೊಟ್ರೆ ಜನರಿಗೆ ಸಂತೋಷವಾಗುತ್ತೆ. ನಮ್ಮ ಹತ್ರ ಹಣ ಇಲ್ಲ. ಹೀಗಾಗಿ ಊಟ ಚೆನ್ನಾಗಿದ್ರು, ಚೆನ್ನಾಗಿಲ್ಲದಿದ್ರು ಊಟ ಮಾಡ್ತಿದ್ದೀವಿ. ಇನ್ಮೆಲಾದ್ರು ಊಟದ ಗುಣಮಟ್ಟದ ಬದಲಾಗಬೇಕು. ಬರಿ ಅನ್ನ ಸಂಬಾರ್ ಬದಲು, ಮುದ್ದೆಯನ್ನ ಮಾಡ್ಬೇಕು ಎಂದು ಜನ ಊಟದ ವಿಚಾರಕ್ಕೆ ಸಮಾಧಾನ ಹೊರ ಹಾಕಿದ್ದಾರೆ.

Related