ಮತಕ್ಷೇತ್ರದ ಸರ್ವೋತೊಮುಖ ಅಭಿವೃದ್ಧಿಗೆ ಆದ್ಯತೆ

ಮತಕ್ಷೇತ್ರದ ಸರ್ವೋತೊಮುಖ ಅಭಿವೃದ್ಧಿಗೆ ಆದ್ಯತೆ

ಶಹಾಪುರ : ಉತ್ತಮ ಮತ್ತು ಗುಣಮಟ್ಟದ ವಿಶಾಲವಾದ ರಸ್ತೆ, ಸೇತುವೆ ನಿರ್ಮಾಣಕ್ಕೆ ಒತ್ತು ನೀಡಿ ನಗರಕ್ಕಿಂತ ಗ್ರಾಮಿಣ ಭಾಗ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದ್ದು. ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಪಟ್ಟಣದ ಗೋಗಿ ಹತ್ತಿರದ ಸಿಂದಗಿ ಕೊಡಂಗಲ್‌ಗೆ ಹೋಗುವ ರಸ್ತೆಯಲ್ಲಿ 2018-19 ನೇ ಸಾಲಿನ ಲೋಕೊಪಯೋಗಿ ಇಲಾಖೆಯ 1.03 ಕೋಟಿ ರೂ. ವೆಚ್ಚದಲ್ಲಿ ಸೇತುವೆ ರಸ್ತೆ ಕಾಮಗಾರಿಯನ್ನು ಅವರು ಉದ್ಘಾಟಿಸಿದರು.

ಬಳಿಕ ಮಾತಾನಾಡಿದ ಅವರು, ಬಹು ದಿನದ ಬೇಡಿಕೆಯಾಗಿದ್ದು ರಸ್ತೆಗಳು ಸುಧಾರಣೆಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲಿದ್ದು ಕೇಲ ಗ್ರಾಮಗಳ ರಸ್ತೆ ಅಭಿವೃದ್ಧಿಗಾಗಿ ಲಕ್ಷ್ಯಾಂತರ ಅನುದಾನವನ್ನು ನೀಡಲಾಗುತ್ತಿದ್ದು ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ. ದೊಡ್ಡ ಪ್ರಮಾಣದ ವಾಹನಗಳು ಸೇತುವೆಯ ಮೇಲಿಂದ ಸಂಚರಿಸಲಿದ್ದು ಯಾವುದೇ ಅಪಾಯಗಳು ಸಂಭವಿಸುವುದಿಲ್ಲ. ಗುಣಮಟ್ಟದಲ್ಲಿ ಯಾವುದೇ ಕೊರತೆಯಿಲ್ಲ. ಕಾಂಕ್ರೇಟ್ ರಸ್ತೆ ನಿರ್ಮಾಣದಿಂದ ಪದೇ ಪದೇ ರಸ್ತೆ ದುರಸ್ತಿ ಮಾಡುವುದು ತಪ್ಪುತ್ತದೆ. ಕಾಂಕ್ರಿಟ್ ರಸ್ತೆ ನಿರ್ಮಾಣದಿಂದ ರಸ್ತೆ ಬಹು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಆ ನಿಟ್ಟಿನಲ್ಲಿ ಕಾಂಕ್ರೀಟ್ ರಸ್ತೆಗೆ ಆದ್ಯತೆ ನೀಡಲಾಗಿದ್ದು, ಗುತ್ತಿಗೆದಾರರು ಸಹ ಕಾಮಗಾರಿಯನ್ನು ಸಮಯಕ್ಕೆ ಸರಿಯಾಗಿ ಕೆಲಸವನ್ನು ಮುಗಿಸಿದ್ದು ಗುಣಮಟ್ಟದ ವಸ್ತುಗಳನ್ನು ಬಳಸಿದ್ದಾರೆ. ಕಾಮಗಾರಿಯಲ್ಲಿ ಯಾವುದೇ ಲೋಪವಿಲ್ಲದೇ ಪೂರ್ಣಗೊಳಿಸಿದ್ದು. ಸುತ್ತಲಿನ ಗ್ರಾಮಸ್ಥರು ಸಹ ಗುತ್ತಗೆದಾರರಿಗೆ ಸಹಕಾರ ನೀಡಿದ್ದಾರೆ.

ತಾಲೂಕಿನಾದ್ಯಂತ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಗಳು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಸದ್ಯ ಕೊವೀಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲ್ಕಲ್, ಮಾಣಿಕರೆಡ್ಡಿ ಶಿರಡ್ಡಿ, ಬಸವರಾಜಪ್ಪಗೌಡ ತಂಗಡಗಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಪ್ಪ ಉಳ್ಳಂಡಗೇರಿ, ಶಿವಮಾಹಂತ ಚಂದಾಪೂರ್, ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ಗುತ್ತೇಗೆದಾರರಾದ ಚಂದ್ರಯಗೌಡ ದೇವಣಗಾಂವ್, ಶಿವಣ್ಣ ದಿಗ್ಗಿ, ವಿಶ್ವನಾಥರೆಡ್ಡ ಶಿರಡ್ಡಿ, ಚಂದಪ್ಪ ಸೀತ್ನಿ, ಸುಭಾಶ್‌ಗೌಡ ದೇವಣಗಾಂವ್, ಬಸಣ್ಣಗೌಡ ಆಲ್ದಾಳ್, ಬಸಣ್ಣಗೌಡ ಪಾಟೀಲ್ ಚಿಂಚೋಳಿ, ಮಾನಪ್ಪ ಗಡ್ಡದ್, ಜೈರೆಡ್ಡಿ ಹೊಸ್ಮನಿ, ಎಇಇ ಸಿದ್ದಲಿಂಗಪ್ಪ ಐರೆಡ್ಡಿ, ಜೆ ಇ ಮರೆಪ್ಪ, ಶಂಕರಗೌಡ ಕರಕಳ್ಳಿ ಸೇರಿದಂತೆ ಗ್ರಾಮಸ್ಥರು ಇದ್ದರು.

Related