ಪತ್ರಿಕಾ ದಿನಾಚರಣೆ

  • In State
  • August 1, 2021
  • 317 Views
ಪತ್ರಿಕಾ ದಿನಾಚರಣೆ

ಮುದ್ದೇಬಿಹಾಳ – 2021ನೇ ಸಾಲಿನ ಪತ್ರಿಕಾ ದಿನಾಚರಣೆಯನ್ನು ಆ.16ರಂದು ವಿಶಿಷ್ಟವಾಗಿ ಆಚರಿಸಲು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತೀರ್ಮಾನಿಸಿದೆ. ಸಂಘದ ತಾ. ಅಧ್ಯಕ್ಷ ಎ.ಎಲ್.ಮುಲ್ಲಾ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಕೊಳ್ಳಲಾಗಿದೆ.

ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ, ನಗರ ಆಶಾ ಕಾರ್ಯಕರ್ತೆಯರು ಸೇರಿ ಕೋವಿಡ್-19 ಎರಡನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಶ್ರಮಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಸಾರ್ಥಕಗೊಳಿಸಲಾಗುತ್ತದೆ ಎಂದು ಮುಲ್ಲಾ ತಿಳಿಸಿದರು. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಈ ಕುರಿತು ಕೂಲಂಕುಶವಾಗಿ ಚರ್ಚಿಸಲಾಯಿತು.

ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಆಗಿರುವ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವ ಸಿ.ಎಸ್.ನಾಡಗೌಡ, ಕಾನಿಪ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು, ಸ್ಥಳೀಯ ತಾಲೂಕು ಮಟ್ಟದ ಅಧಿಕಾರಿಗಳು, ಗಣ್ಯರನ್ನು, ಸಂಘ ಸಂಸ್ಥೆಗಳ ಮುಖಂಡರನ್ನು ಆಹ್ವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾನಿಪ ಸಂಘದ ಜಿ.ಉಪಾಧ್ಯಕ್ಷ ಡಿ.ಬಿ.ವಡವಡಗಿ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಿದ್ದು ಚಲವಾದಿ, ಪದಾಧಿಕಾರಿಗಳಾದ ಗುರುನಾಥ ಕತ್ತಿ, ಪರಶುರಾಮ ಕೊಣ್ಣೂರ, ಸಾಗರ ಉಕ್ಕಲಿ, ಸದಸ್ಯರಾದ ಶಿವಕುಮಾರ ಶಾರದಳ್ಳಿ, ಮುತ್ತು ವಡವಡಗಿ, ಉಮರ್‌ಫಾರೂಕ್ ಹಾಲ್ಯಾಳ, ಎನ್.ಎ.ನದಾಫ, ಚೇತನ್ ಶಿವಶಿಂಪಿ, ಸಂತೋಷ ಶಹಾಪೂರ, ರವಿ ನಂದೆಪ್ಪನವರ್, ನಾಲತವಾಡದ ಮಹಿಬೂಬ ಹಳ್ಳೂರ, ಮಹಾಂತೇಶ ನೂಲಿನವರ್ ಮತ್ತಿತರರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.

Related