ಪ್ರತಾಪ್​ ಸಿಂಹನಂತಹ ಅಯೋಗ್ಯ, ಮುಠ್ಠಾಳ ಮತ್ತೊಬ್ಬನಿಲ್ಲ: ಪ್ರದೀಪ್ ಈಶ್ವರ್

ಪ್ರತಾಪ್​ ಸಿಂಹನಂತಹ ಅಯೋಗ್ಯ, ಮುಠ್ಠಾಳ ಮತ್ತೊಬ್ಬನಿಲ್ಲ: ಪ್ರದೀಪ್ ಈಶ್ವರ್

ಮೈಸೂರು: ಶ್ರೀರಾಮಚಂದ್ರ ಹಿಂದುಗಳ ಆರಾಧ್ಯ ದೈವ. ನಾನು ಕೂಡ ಶ್ರೀರಾಮನ ಭಕ್ತ. ನಾವು ಶ್ರೀರಾಮನನ್ನು ಆರಾಧಿಸುತ್ತೇವೆ. ಅಲ್ಲ ಮತ್ತು ಯೇಸುನನ್ನು ಗೌರವಿಸುತ್ತೇವೆ. ಆದರೆ ಈ ಬಿಜೆಪಿಯವರ ತರ ಧರ್ಮ ಧರ್ಮಗಳ ಮಧ್ಯೆ ಕಿತ್ತಾಟ ತಂದಿರುವ ಕೆಲಸ ನಾವು ಮಾಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಅಜೆಂಡನ ಬೇರೆ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಮಾಡುವುದೇ ಬೇರೆ, ಹಾಗಾಗಿ ಯಾವುದೇ ಕಾರಣಕ್ಕೂ ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಒಳ್ಳೆಯದಲ್ಲ ಎಂದು ಬಿಜೆಪಿಯವರಿಗೆ ಟಾಂಗ್ ನೀಡಿದ್ದಾರೆ.

ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ. ಇನ್ನು ಬಿಜೆಪಿ ಪಕ್ಷದಲ್ಲಿ ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವರಲ್ಲಿ ಪ್ರತಾಪ್ ಸಿಂಹ ಅವರು ಎತ್ತಿದ ಕೈ. ಅವನಂತ ಅಯೋಗ್ಯ ಮುಟ್ಟಾಳ ದೇಶದಲ್ಲಿ ಯಾರು ಇಲ್ಲವೆಂದು ಸಂಸದ ಪ್ರತಾಪ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

45 ವರ್ಷದ ರಾಜಕೀಯ ಅನುಭವ ಇರುವಂತಹ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಯ್ಯುವಂತಹ ಅರ್ಹತೆ ಪ್ರತಾಪ್ ಸಿಂಹಗೆ ಇಲ್ಲ.

ಪ್ರತಾಪ್ ಸಿಂಹ ಅವರೇ ಬಾಯ್ ಮುಚ್ಕೊಂಡಿರಬೇಕು. ನಿಮ್ಮ ಬಾಯಿ ಹಿತವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹಗೆ ಶಾಸಕ ಪ್ರದೀಪ್ ಈಶ್ವರ್ ಅವರು ಎಚ್ಚರಿಕೆ ನೀಡಿದ್ದಾರೆ.

ಲೋಕಸಭಾ ಗೆ ಪಾಸ್ ಕೊಟ್ಟೂರು ನೀವು ದೇಶದ್ರೋಹಿ ಅಲ್ವಾ? ಈಗ ಆನ್ಸರ್ ಮಾಡಿ. ಸ್ಮೋಕ್ ಬಾಂಬ್ ಹಾಕಿಸಿ ಇಡೀ ದೇಶವನ್ನೇ ಅಲ್ಲೋಲಕಲ್ಲವನ್ನು ಮಾಡಿದ್ದೀರಲ್ಲ ನಿಮಗೆ ಮಾನ ಮರ್ಯಾದೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತಾಡಿದ್ರೆ ಹುಷಾರ್​, ಪರಿಣಾಮ ನೆಟ್ಟಗಿರಲ್ಲ. ನಿಮ್ಮ ಬಾಯಿ ತೆವಲನ್ನು ಕಡಿಮೆ ಮಾಡಿ ಸುಮ್ಮನೆ ಇರಬೇಕು. ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ಹಾಕಿದವನಿಗೆ ಪಾಸ್ ನೀಡಿದ್ದೀರಿ. ನೀವು ದೇಶ ದ್ರೋಹಿ ಅಲ್ಲವೇ? ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ.

ಇನ್ನು ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿಕೂಟದ ಅಭ್ಯರ್ಥಿ ಯಾರು ಎನ್ನುವುದೇ ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಯಾಕಂದ್ರೆ, ಈ ಬಾರಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್​ ಇಲ್ಲ. ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದೇ ಗೊಂದಲಮಯವಾಗಿದೆ. ಆದ್ರೆ, ಪ್ರತಾಪ್ ಸಿಂಹ ಟಿಕೆಟ್​ ಸಿಕ್ಕೇ ಸಿಗುತ್ತೆ ಮತ್ತೆ ಈ ಬಾರಿ 2 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆದ್ದೇ ಗೆಲ್ಲತ್ತೇನೆ ಎನ್ನುವ ವಿಶ್ವಾಸದಲ್ಲಿದ್ದಾರೆ.

 

Related