ಅಕ್ರಮ ಮದ್ಯ ವಶ : ಆರೋಪಿ ಬಂಧನ

  • In Crime
  • May 10, 2022
  • 230 Views
ಅಕ್ರಮ ಮದ್ಯ ವಶ : ಆರೋಪಿ ಬಂಧನ

ಮಾಲೂರು: ಅಬಕಾರಿ ಇಲಾಖೆಯವರ ಖಚಿತ ಮಾಹಿತಿ ಮೇರೆಗೆ ಟೇಕಲ್ ಹೋಬಳಿಯ ಕೆ.ಜಿ ಹಳ್ಳಿಯಲ್ಲಿ ಸುಮಾರು ೮೫ ಸಾವಿರಕ್ಕೂ ಹೆಚ್ಚು ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ .

ಕೋಲಾರ ಜಿಲ್ಲೆಯ ಅಬಕಾರಿ ಇಲಾಖೆಯ ಆಯುಕ್ತ ರಮೇಶ್ ಕುಮಾರ್, ಉಪ ಆಯುಕ್ತರು, ಶ್ರೀಶೈಲ ಆವಜಿ ರವರ ಮಾರ್ಗದರ್ಶನದಂತೆ ಅಬಕಾರಿ ಉಪ ಅಧೀಕ್ಷಕರು, ಕೋಲಾರ ಉಪ ವಿಭಾಗ, ಕೋಲಾರ ರವರ ನಿರ್ದೇಶನದಲ್ಲಿ ವಿ.ಅರುಣ್‌ಕುಮಾರ್ ಅಬಕಾರಿ ನಿರೀಕ್ಷಕರು ಅವರುಗಳು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. ಮೇ ೮ರ ಸಂಜೆ ೭.೫೦ ಗಂಟೆಗೆ ಟೇಕಲ್ ಹೋಬಳಿ, ಕೆ.ಜಿ.ಹಳ್ಳಿ ಪಂಚಾಯಿತಿ, ಕಾವಲಗಿರಿಯನಹಳ್ಳಿ ಗ್ರಾಮದ ಆಂಜಿನಪ್ಪ ಇವರಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಿದ ಸಿಬ್ಬಂದಿ ೪೫ ಮದ್ಯದ ಬಾಟಲುಗಳನ್ನು ವಶಪಡಿಸಿಕೊಂಡು ಇದರ ಅಂದಾಜು ಬೆಲೆ ಸುಮಾರು ೮೫ ಸಾವಿರಕ್ಕೂ ಹೆಚ್ಚು. ಆರೋಪಿತರಾದ ಆಂಜಿನಪ್ಪ(೪೭)ರನ್ನು ದಸ್ತಗಿರಿಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಈ ದಾಳಿಯ ಸಮಯದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಜಿ.ಎಸ್.ಭರತ್ ಹಾಗೂ ಸಿಬ್ಬಂದಿಯವರಾದ ಈ. ಶಿವಕುಮಾರ್, ವಿ.ಗಜೇಂದ್ರಕುಮಾರ್, ವೀರೆಶ್ ಹಾಗೂ ರಜನಿಕಾಂತ್ ಭಾಗವಹಿಸಿದ್ದರು.

Related