ಕವಿ, ಹೋರಾಟಗಾರ ಡಾ. ಪಿ ವರವರ ರಾವ್‌ಗೆ ಜಾಮೀನು

ಕವಿ, ಹೋರಾಟಗಾರ ಡಾ. ಪಿ ವರವರ ರಾವ್‌ಗೆ ಜಾಮೀನು

ನವದೆಹಲಿ, 10: ಕವಿ, ಹೋರಾಟಗಾರ ಡಾ. ಪಿ ವರವರ ರಾವ್‌ಗೆ ಸುಪ್ರೀಂಕೋರ್ಟ್ ಇಂದು ಜಾಮೀನು ನೀಡಿದೆ. ಸಾಮಾಜಿಕ ಹೋರಾಟಗಾರ ವರವರ ರಾವ್‌ಗೆ ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಮಂಜೂರಾಗಿದೆ. 2018 ರ ಭೀಮಾ ಕೊರೆಂಗಾವ್ ಹಿಂಸಾಚಾರ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್, ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಜಾಮೀನು ಅರ್ಜಿಯ ಬಗ್ಗೆ ಔಪಚಾರಿಕ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆ ವೇಳೆ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿತ್ತು. ಅಂತಿಮ ವಿಚಾರಣೆ ಆಗಸ್ಟ್ 10ರಂದು ನಡೆಸಿ, ತಾತ್ಕಾಲಿಕವಾಗಿ ನೀಡಿದ ಜಾಮೀನನ್ನು ಪೂರ್ಣಾವಧಿ ಜಾಮೀನು ಆಗಿ ನೀಡಿದ್ದಾರೆ.
ಬಂಧನದ ಬಳಿಕ 83 ವರ್ಷ ವಯಸ್ಸಿನ ರಾವ್ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಕ್ಷೀಣಿಸಿತ್ತು. ರಾವ್ ಪರ ವಕೀಲರಾದ ಇಂದಿರಾ ಜೈಸಿಂಗ್, ಅವರ ಆರೋಗ್ಯ ಕ್ಷೀಣಿಸುತ್ತಿದೆ ಮತ್ತು ಅವರು ಜೈಲಿನಲ್ಲಿಯೇ ಕೊನೆಯುಸಿರು ಎಳೆಯುವ ಅಪಾಯಕಾರಿ ಸ್ಥಿತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಂತರ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

ಜೈಲಿನಲ್ಲಿರುವ ರಾವ್ ಅವರನ್ನು ನಾನಾವತಿ ಆಸ್ಪತ್ರೆಯ ವೈದ್ಯರ ತಂಡ ತಪಾಸಣೆ ನಡೆಸುವಂತೆ ಹೈಕೋರ್ಟ್ ಆರಂಭದಲ್ಲಿ ಸಲಹೆ ನೀಡಿತ್ತು. ಆದರೆ ಇದಕ್ಕೆ ಎನ್‌ಐಎ ವಿರೋಧ ವ್ಯಕ್ತಪಡಿಸಿತು.

Related