ಬ್ರಿಮ್ಸ್ ಆಸ್ಪತ್ರೆಯಲ್ಲಿ ಪಿಎಫ್ಟಿ ಪರೀಕ್ಷೆ ಲಭ್ಯ

ಬ್ರಿಮ್ಸ್ ಆಸ್ಪತ್ರೆಯಲ್ಲಿ ಪಿಎಫ್ಟಿ ಪರೀಕ್ಷೆ ಲಭ್ಯ

ಔರಾದ : ಕೋವಿಡ್-19 ನಿಂದ ಗುಣಮುಖರಾದ ರೋಗಿಗಳಿಗೆ ಹಾಗೂ ಇನ್ನೀತರ ಶ್ವಾಸಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಾದ ದಮ್ಮು, ಅಸ್ತಮಾದಿಂದ ಬಳಲುವ ಸಾಮಾನ್ಯ ನಾಗರಿಕರಿಗೆ ಉಪಯುಕ್ತವಾಗಿರುವ ಪಿಎಫ್ಟಿ ಯಂತ್ರವು ಇದೀಗ ಬೀದರ್ ನಗರದಲ್ಲಿ ಸೋಮವಾರದಿಂದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಿದೆ.

ಜಿಲ್ಲಾಧಿಕಾರಿಗಳಾದ ರಾಮಚಂದ್ರನ್.ಆರ್ ಆ. 28ರಂದು ತಾವೇ ಖುದ್ದು ಬ್ರಿಮ್ಸ್ ಆಸ್ಪತ್ರೆಗೆ ತೆರಳಿ, ಅಲ್ಲಿ ಪ್ರಥಮ ಪಿ.ಎಫ್.ಟಿ ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಮೂಲಕ ತಮ್ಮ ಶ್ವಾಸಕೋಶದ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಿಕೊಂಡು, ಪಿಎಫ್ಟಿ ಯಂತ್ರಕ್ಕೆ ಚಾಲನೆ ನೀಡಿದರು.

ಎದೆ ಮತ್ತು ಕ್ಷಯರೋಗ ವಿಭಾಗದ ಮುಖ್ಯಸ್ಥರಾದ ಡಾ.ಯೋಗೇಶ್ ಕಾಮಶೆಟ್ಟೆ ಜಿಲ್ಲಾಧಿಕಾರಿಗಳ ಎದೆ ಪರೀಕ್ಷೆಯನ್ನು ನಡೆಸಿದರು. ಪಿ.ಎಫ್.ಟಿ ಉಪಕರಣವನ್ನು ಸಂಸ್ಥೆಗೆ ನೀಡಿದ ಜಿಲ್ಲಾಧಿಕಾರಿಗಳಿಗೆ ಬ್ರಿಮ್ಸ್ ಆಸ್ಪತ್ರೆಯ ವೈದ್ಯರುಗಳು ಇದೆ ಸಂದರ್ಭದಲ್ಲಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಬ್ರಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಚಂದ್ರಕಾಂತ ಚಿಲ್ಲರ್ಗಿ, ವಿಭಾಗದ ತಜ್ಞ ವೈದ್ಯರಾದ ಡಾ.ಸತೀಸ್ ಮುಡಬಿ, ವೈದ್ಯಕೀಯ ಅಧೀಕ್ಷಕರಾದ ಡಾ.ಶಿವಕುಮಾರ ಶೆಟಕಾರ್ ಹಾಗೂ ಇನ್ನೀತರರಿದ್ದರು.

Related