ರಾಜ್ಯದಲ್ಲಿ ಇಂದಿನಿಂದ ಜನರ ಜೇಬಿಗೆ ಕತ್ತರಿ ಬೀಳುವುದು ಪಕ್ಕಾ

ರಾಜ್ಯದಲ್ಲಿ ಇಂದಿನಿಂದ ಜನರ ಜೇಬಿಗೆ ಕತ್ತರಿ ಬೀಳುವುದು ಪಕ್ಕಾ

ಬೆಂಗಳೂರು: ರಾಜ್ಯದ ಜನ ಈಗಾಗಲೇ ಬಿಸಿ ಏರಿಕೆ ಬೆಲೆಯಿಂದ ತತ್ತರಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ರಾಜ್ಯದಲ್ಲಿ ಟೊಮ್ಯಾಟೋ ಬೆಲೆ ಗಗನಕೇಳುತ್ತಿರುವುದರಿಂದ ಟೊಮ್ಯಾಟೊ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಮತ್ತು ಹೊರ ರಾಜ್ಯದಲ್ಲಿ ಸತತವಾಗಿ ಮಳೆ ಆಗುತ್ತಿರುವುದರಿಂದ ಟೊಮ್ಯಾಟೊ ಬೆಲೆ ಹೆಚ್ಚಾಗುತ್ತಿದೆ.

ಇನ್ನು ರಾಜ್ಯದ ಜನರಿಗೆ ಇಂದಿನಿಂದ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಹೌದು ಆಗಸ್ಟ್ 1 ಅಂದ್ರೆ ಇಂದಿನಿಂದ ರಾಜ್ಯದ ಜನತೆಗೆ ಹಾಲಿನ ದರದಲ್ಲಿ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಇಂದಿನಿಂದ ದುಬಾರಿ ದುನಿಯಾ ಶುರು. ಟೊಮೆಟೊ ದರ ಏರಿಕೆಗೆ ರಾಜ್ಯದ ಜನ ರೋಸಿ ಹೋಗಿದ್ದು ಇಂದಿನಿಂದ ಜನರ ಮೇಲೆ ಮತ್ತೊಂದು ದರ ಏರಿಕೆ ಬರೆ ಬೀಳಲಿದೆ. ಕಳೆದ ವಾರ 100 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಈಗ ಏಕಾಏಕಿ ಡಬಲ್ ಆಗಿದ್ದು ಕೆ.ಆರ್ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ 140-160 ರೂ. ಇದೆ. ಇನ್ನು ಇಂದಿನಿಂದ ನಂದಿನಿ ಹಾಲಿನ ಮೇಲೆ ಮೂರು ರೂಪಾಯಿ ದರ ಏರಿಕೆಯಾಗ್ತಿದ್ರೆ ಇದರಿಂದ ಹೋಟೆಲ್ ಊಟ ತಿಂಡಿ ಕಾಫಿ‌ ಟೀ ಮೇಲೆ ಹತ್ತರಷ್ಟು ದರ ಏರಿಕೆಯಾಗ್ತಿದೆ. ಹೀಗಾಗಿ ಇಂದಿನಿಂದ ಜನರ ಜೇಬಿಗೆ ಕತ್ತರಿ ಬೀಳುವುದು ಪಕ್ಕಾ.

ಇನ್ನೂ ಇಂದಿನಿಂದ ಪ್ರತಿ ಲೀಟರ್ ಹಾಲಿನ ದರ 3 ರೂಪಾಯಿ ಹೆಚ್ಚಿಸಲಾಗಿದೆ. ಜುಲೈ 21 ರಂದು ನಡೆದ ಸಭೆಯಲ್ಲಿ ಪ್ರತಿ ಲೀ. ಗೆ 3 ರೂಪಾಯಿ ಹೆಚ್ಚಿಸುವಂತೆ ನಿರ್ಧಾರಿಸಿದ್ದ ಸರ್ಕಾರ ಆಗಸ್ಟ್ 1 ರಿಂದ ಅಧಿಕೃತವಾಗಿ ಜಾರಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು., ಹೀಗಾಗಿ ಇಂದಿನಿಂದ ಅಧಿಕೃತವಾಗಿ ಪ್ರತಿ ಲೀ ಹಾಲಿನ ಮೇಲೆ 3 ರೂಪಾಯಿ ಹೆಚ್ಚಿಸಲಾಗಿದೆ.

ಟೋಲ್ಡ್ ಮಿಲ್ಕ್ – ಹಿಂದಿನ ದರ 39 ರೂ (ಲೀ) – ಪರಿಷ್ಕೃತ ದರ 42 ರೂ

ಹೋಮೋಜೆನೈಸ್ಡ್ 40 ಹಿಂದಿನ ದರ – ಪರಿಷ್ಕೃತ ದರ 43 ರೂ

ಹಸುವಿನ ಹಾಲು ( ಹಸಿರು ಪೊಟ್ಟಣ ) ಹಿಂದಿನ ದರ 43 ರೂ – ಪರಿಷ್ಕೃತ ದರ 46 ರೂ.

ಶುಭಂ ಹಾಲು – ಹಿಂದಿನ ದರ 45 ರೂ – ಇಂದಿನ ದರ 48 ರೂ

ಮೊಸರು ಪ್ರತಿ ಕೆಜಿ – 47 ರೂ. ಹಿಂದಿನ ದರ – ಈಗಿನ ದರ 50 ರೂ

ಮಜ್ಜಿಗೆ 200ml – ಹಿಂದಿನ ದರ 8 ರೂ – ಪರಿಷ್ಕೃತ 9 ರೂ

ಅತ್ತ ಹಾಲಿನ ದರ, ಇತ್ತ ಹೊಟೇಲ್ ತಿಂಡಿ ತಿನಿಸಿನ ಮೇಲೆ ಹತ್ತರಷ್ಟು ದರ ಏರಿಕೆಯಾಗಲಿದೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಹೋಟೆಲ್ ತಿಂಡಿಗಳ ಬೆಲೆ ಶೇಕಡಾ 10ರಷ್ಟು ದರ ಏರಿಕೆ ಮಾಡಲಾಗಿದೆ. ಕಾಫಿ, ಟೀ, ತಿಂಡಿ ದರ ಏರಿಕೆ ಮಾಡಲು ಹೋಟೆಲ್ ಮಾಲೀಕರು ನಿರ್ಧಾರ ಮಾಡಿದ್ದು ಆಗಸ್ಟ್ 1ರಿಂದಲೇ ದರ ಏರಿಕೆಯಾಗಲಿದೆ.

 

Related