ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ

ಸಿರುಗುಪ್ಪ, ಏ. 05: ದೇಶದಲ್ಲಿ ಕೊರೋನ ಎಂಬ ಮಹಾಮಾರಿ ಕಾಯಿಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಕೊರೋನ ಎಂಬ ಮಹಾಮಾರಿ ಕಾಯಿಲೆಯನ್ನು ನಿಯಂತ್ರಿಸಲು ದೇಶದಲ್ಲಿ 21 ದಿನ ಲಾಕ್ ಡೌನ್ ಘೋಷಣೆಯಾಗಿದ್ದರೂ ಸಹ, ಸಾರ್ವಜನಿಕರು ಕೊರೋನ ವೈರಸ್ ನ ಭಯವಿಲ್ಲದೆ ಸಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ನೂಕುನುಗ್ಗಲಲ್ಲಿ ತರಕಾರಿ ಮತು ರೇಷನ್ ಗಳಂತಹ ದಿನನಿತ್ಯದ ಪದಾರ್ಥಗಳನ್ನು ತೆಗೆದುಕೊಳ್ಳಲು ಹೋಗುತ್ತಿದ್ದಾರೆ. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.

ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಲ್ಲಿ ರೇಷನ್ ತೆಗೆದುಕೊಳ್ಳುವಾಗ ಜನರು ಬಾರಿ ಜನಸಂಖ್ಯೆ ಸೇರಿದ್ದು, ವೈರಸ್ ಭಯವಿಲ್ಲದೆ ರೇಷನ ತೆಗೆದುಕೊಳ್ಳಲು ನೂಕ್ಕುನೂಗ್ಗಲಿನಲ್ಲಿ ಮುಂದಾಗಿದ್ದಾರೆ. ಕೊರೋನ ವೈರಸ್ ಹರಡುವ ಭೀತಿ ಲೆಕ್ಕಿಸದೇ ನಾ ಮುಂದೂ ನೀ ಮುಂದೂ ಎಂದು ಮುನ್ನುಗುತ್ತಿದ್ದಾರೆ.

Related