ಮಚ್ಚಿನಿಂದ ಕೊಚ್ಚಿ ಕೊಂದ ಪಾಗಲ್ ಪ್ರೇಮಿ

ಮಚ್ಚಿನಿಂದ ಕೊಚ್ಚಿ ಕೊಂದ ಪಾಗಲ್ ಪ್ರೇಮಿ

ಹಾಸನ : ಸಕಲೇಶಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ತಾನು ಪ್ರೀತಿಸಿದ್ದ ಯುವತಿ ಪ್ರೀತಿಗೆ ನಿರಾಕರಿಸಿದಳೆಂಬ ಸಿಟ್ಟಿನಿಂದ ಪಾಗಲ್ ಪ್ರೇಮಿ ಯುವತಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದಿರುವ ಘಟನೆ ನಡೆದಿದೆ.

ಸುಷ್ಮಿತಾ (21) ಹತ್ಯೆಗೀಡಾದ ಯುವತಿ. ಈಕೆಯನ್ನು ಅದೇ ಗ್ರಾಮದ ಹೇಮಂತ್ (25) ಹೆಸರಿನ ಯುವಕ ಪ್ರೀತಿಸುತ್ತಿದ್ದನಂತೆ. ಆದರೆ ಯುವತಿ ಪ್ರೀತಿಗೆ ಒಲ್ಲೆ ಎಂದಿದ್ದಾಳೆ.

ಗುರುವಾರದಂದು ಯುವತಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಏಕಾಏಕಿ ಆಕೆಯ ಮೇಲೆ ಹೇಮಂತ್ ದಾಳಿ ನಡೆಸಿದ್ದಾನೆ. ಮಚ್ಚಿನಿಂದ ಆಕೆಯನ್ನು ಮನಬಂದಂತೆ  ಕೊಚ್ಚಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ.

Related