ಅಪಾಯದ ಅಂಚಿನಲ್ಲಿರುವ ಓವರ್ ಹೆಡ್ ಟ್ಯಾಂಕ್

  • In State
  • July 7, 2023
  • 233 Views
ಅಪಾಯದ ಅಂಚಿನಲ್ಲಿರುವ ಓವರ್ ಹೆಡ್ ಟ್ಯಾಂಕ್

ಕೋಲಾರ: ನಗರಸಭೆ ವಾರ್ಡ್  ಸಂಖ್ಯೆ 15  ಹಾರೋ ಹಳ್ಳಿ  ಗೋಕುಲ ಕಾಲೇಜು ಮುಂಭಾಗ ಇರುವ 30 ವರ್ಷದ ಹಳೆಯ ಕಾಲದ ಓವರ್ ಹೆಡ್ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದೆ. ಪಕ್ಕದಲ್ಲಿ ಅಂಗನವಾಡಿ ಕೇಂದ್ರವಿದ್ದು, ಗ್ರಾಮದ ಜನರು ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಅಂಗನವಾಡಿ ಕಳಿಸಲು ಭಯಪಡುತ್ತಿದ್ದಾರೆ.

ಒಂದು ವೇಳೆ ಅಂಗನವಾಡಿಗೆ ನಮ್ಮ ಮಕ್ಕಳನ್ನು ಕಳಿಸಿದರೆ ಅಕಸ್ಮಾತ್ ಆಗಿ ಟ್ಯಾಂಕ್ ಕುಸಿದು ಬಿದ್ದರೆ ನಮ್ಮ ಮಕ್ಕಳಿಗೆ ಜವಾಬ್ದಾರಿಯರೆಂದು ಅಂಗನವಾಡಿ ಕಾರ್ಯಕರ್ತರಿಗೆ ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಇನ್ನುಇದೇ ರಸ್ತೆಯಲ್ಲಿ ಗೋಕುಲ ಕಾಲೇಜಿನ ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳು ಪ್ರತಿನಿತ್ಯ ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.

ಈಗಾಗಲೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಬಗ್ಗೆ ವಾರ್ಡ್ ನಂಬರ್ 15 ಕಾರ್ಪೊರೇಟರ್ ಆಗಿರುವಂತಹ ಸಂಗೀತ ಜಗದೀಶ್ ಅವರಿಗೆ ಹಲವಾರು ಬಾರಿ ಮಾಹಿತಿ ನೀಡಿದರು ಸಹ ಇದರ ಬಗ್ಗೆ ಯಾವುದೇ ರೀತಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಜಾವಾಹಿನಿ ಪತ್ರಿಕೆಯ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ

ಇದಕ್ಕೆ ಸಂಬಂಧಪಟ್ಟ ಆಯುಕ್ತರು ಕೂಡಲೇ ಸ್ಥಳ ಪರಿಶೀಲನೆ ಮಾಡಿ ಓವರ್ ಹೆಡ್ ಟ್ಯಾಂಕ್ ಕುಸಿದು ಬೀಳುವ ಸ್ಥಿತಿಯಲ್ಲಿದೆ ಇದನ್ನು ಕೂಡಲೇ ತೆರವುಗೊಳಿಸಿ ಎಂದು ಸ್ಥಳೀಯ ಆಟೋ ಚಾಲಕರು ಶ್ರೀನಾಥ್, ಅಖಿಲ, ಮನೋಜ್, ಹಾಗೂ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ವರದಿಗಾರ

ರೆಡ್ಡಿ.ಎಂ

Related