‘ಮದ್ರಾಸ್ ಐ’ ಸೋಂಕು ನಿತ್ಯ ಮುಂಜಾಗ್ರತೆಗೆ ನೇತ್ರ ತಜ್ಞ ಸಲಹೆ

‘ಮದ್ರಾಸ್ ಐ’ ಸೋಂಕು ನಿತ್ಯ ಮುಂಜಾಗ್ರತೆಗೆ ನೇತ್ರ ತಜ್ಞ ಸಲಹೆ

ಕೋಲಾರ: ನಗರದ ವಿವಿಧ ಕಣ್ಣಾಸ್ಪತೆಗಳಿಗೆ ಪ್ರತಿನಿತ್ಯ 150ಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಕಣ್ಣಿನ ಬಿಳಿಗುಡ್ಡೆಗೆ ಆಗುವ ಇನ್‌ಪೆಕ್ಷನ್‌ ನಿಂದ ಈ ಸಮಸ್ಯೆ ಕಂಡು ಬರುತಿದೆ.

ಕಳೆದ 10 ವರ್ಷಗಳಿಂದ ಇಷ್ಟೊಂದು ವ್ಯಾಪಕವಾಗಿ ಈ ರೋಗ ಹರಡುತ್ತಿರುವುದು ಇದೇ ಮೊದಲು ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಮಾನ್ಸುನ್, ಗಾಳಿಕಾಲದಲ್ಲಿ ಮದ್ರಾಸ್ ಐ ಸಮಸ್ಯೆ ಅಲ್ಲಲ್ಲಿ ಕಾಣಿಸಿ ಕೊಳ್ಳುತ್ತಿತ್ತು ಆದರೆ ಈ ಬಾರಿ ಇಡೀ ದೇಶದಲ್ಲೇ ಇದು ವ್ಯಾಪಕವಾಗಿ ಹರಡುತ್ತಿದ್ದು, ಪೋಷಕರು ಮಕ್ಕಳ ಬಗ್ಗೆಯೂ ಅತಿ ಜಾಗ್ರತೆ ವಹಿಸಬೇಕು ಎಂದು ತಿಳಿಸಿದ್ದಾರೆ.

ರೋಗದ ಲಕ್ಷಣ: ವೈರಸ್ ಮತ್ತು ಬ್ಯಾಕ್ಟಿರಿಯಾ ಎರಡರಿಂದಲೂ ಹರಡುವ ‘ಮದ್ರಾಸ್ ಐ’ ಕಂಡುಬಂದರೆ ಸಾಮಾನ್ಯವಾಗಿ ಕಣ್ಣು ಕೆಂಪಗಾಗುವುದು, ಸದಾ ನೀರು ಸುರಿಯುತ್ತಿರುವುದು, ಕಣ್ಣಿನಲ್ಲಿ ಗೀಜು ಹೆಚ್ಚು ಕಾಣಿಸಿಕೊಳ್ಳುವುದು, ಕಣ್ಣಲ್ಲಿ ನೋವು, ಕಣ್ಣಿನಲ್ಲಿ ಏನೋ ಇದ್ದಂತೆ ಅನಿಸುವಿಕೆ ಹಾಗೂ ಕೆಲವರಲ್ಲಿ ಕಣ್ಣಿನ ರೆಪ್ಪೆ ಊತ ಕಂಡುಬರುತ್ತದೆ ಎಂದು ತಿಳಿಸಿರುವ ಅವರು ಈ ಸಮಸ್ಯೆ ಕಂಡು ಬಂದರೆ ಕೂಡಲೇ ಕಣ್ಣಿನ ತಜ್ಞರನ್ನು ಕಂಡು ಚಿಕಿತ್ಸೆ ಪಡೆದು ಕೊಳ್ಳುವಂತೆ ಕೋರಿದ್ದಾರೆ.

ಅಡಿನೋ ವೈರಸ್‌ನಿಂದ ಅತ್ಯಂತ ವ್ಯಾಪಕವಾಗಿ ಹರಡುತ್ತಿರುವ ಕನ್ವೆಂಕ್ಟಿವೈಟೀಸ್ ಅಥವಾ ಜನ ಸಾಮಾನ್ಯರ ಭಾಷೆಯಲ್ಲಿ ‘ಮದ್ರಾಸ್ ಐ’ ಎಂದು ಕರೆಯಲ್ಪಡುವ ಕಣ್ಣಿನ ಸೋಂಕು.

ಸೋಂಕು ಒಬ್ಬರಿಂದ ಒಬ್ಬರಿಗೆ ಅತಿಬೇಗ ಹರಡುವುದರಿಂದ ಇದನ್ನು ತಡೆಯಲು ಅಗತ್ಯ ನಿಯಂತ್ರಣ ಕ್ರಮ ವಹಿಸಲು ಕೋರಿರುವ ಅವರು, ಸೋಂಕಿಗೆ ತುತ್ತಾದವರು ಬಳಸುವ ಸೋಪು, ಟವಲ್‌, ಬೆಡ್‌ ಶೀಟ್, ಹಾಸಿಗೆಯನ್ನು ಆರೋಗ್ಯವಂತರು ಬಳಸಬಾರದು. ಕೈಗಳನ್ನು ನಿರಂತರವಾಗಿ ತೊಳೆಯುವುದು, ಕಣ್ಣನ್ನು ತೊಳೆದುಕೊಂಡು ಸ್ವಚ್ಚತೆ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ಸಲಹೆ ನೀಡಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಬಸ್ ಕಂಡಕ್ಟರ್

ಹೆಚ್ಚಾಗಿ ಸೋಂಕು ಬಸ್‌ ಚಾಲಕರಲ್ಲಿ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ. ಮಕ್ಕಳಲ್ಲಿ ಮದ್ರಾಸ್‌ ಐ ಹರಡುವ ಸಾಧ್ಯತೆ  ಮಕ್ಕಳ ಕಣ್ಣಿನ ಈ ಸಮಸ್ಯೆ ಕಂಡು ಬಂದಾಗ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ.

ಹಾಸ್ಟೆಲ್‌ನಲ್ಲಿ ರುವ ಮಕ್ಕಳಲ್ಲಿ ಈ ಸೋಂಕು ಕಂಡು ಬಂದರೆ ಕೂಡಲೇ ಅವರನ್ನು ಮನೆಗೆ ಕಳುಹಿಸಬೇಕು. ಓಡಾಟ ಕಡಿಮೆ ಮಾಡಿ, ಧೂಳು, ಗಾಳಿಯಲ್ಲಿ ಹೆಚ್ಚು ಓಡಾಡದಿರಿ. ಸೋಂಕಿನ ಕುರಿತು ಆತಂಕ ಬೇಡ. ಸೂಕ್ತ ಚಿಕಿತ್ಸೆ ಪಡೆದುಕೊಂಡರೆ  ಶೀಘ್ರ ಗುಣಮುಖರಾಗಲು ಸಾಧ್ಯ ಎಂದು ನೇತ್ರ ತಜ್ಞ ಡಾ.ಎಚ್. ಆರ್. ಮಂಜುನಾಥ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

(ವರದಿಗಾರ ಕೋಲಾರ ರೆಡ್ಡಿ)

Related