ವಿವಿಧ ಸ್ಥಳಗಳಲ್ಲಿಒತ್ತುವರಿಗಳ ತೆರವು ಕಾರ್ಯಾಚರಣೆ

ವಿವಿಧ ಸ್ಥಳಗಳಲ್ಲಿಒತ್ತುವರಿಗಳ ತೆರವು ಕಾರ್ಯಾಚರಣೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆಯು ಸಕ್ರಿಯವಾಗಿ ನಡೆಯುತ್ತಿದ್ದು, ಇಂದು ದಾಸರಹಳ್ಳಿ, ಯಲಹಂಕ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯ ಸೇರಿದಂತೆ ಒಟ್ಟು 29 ಒತ್ತುವರಿಗಳನ್ನು ತೆರವುಗೊಳಿಸಲಾಗಿರುತ್ತದೆ.

ದಾಸರಹಳ್ಳಿ ವಲಯ

ದಾಸರಹಲ್ಲಿ ವಲಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ 3 ಕಾಲು ಗುಂಟೆ ಜಾಗದಲ್ಲಿ ಒತ್ತುವರಿ ಮಾಡಿಕೊಂಡಿದ್ದ 11 ಒತ್ತುವರಿಗಳಲ್ಲಿ, 4 ತಡೆಗೋಡೆ, 1 ಮೆಟ್ಟಿಲು ಜಾಗ, 1 ಶೌಚಾಲಯ, 1 ಎಲೆಕ್ಟ್ರಿಕಲ್ ಬಾಕ್ಸ್ ರೂಂ ಹಾಗೂ ಕಾಲುವೆಯ ಮೇಲಿದ್ದ ಮನೆಯ ಮೂಲೆ ಭಾಗಗಳ ಒತ್ತುವರಿಗಳನ್ನು 1 ಜೆಸಿಬಿ ಹಾಗೂ 1 ಹಿಟಾಚಿ ಮೂಲಕ ತೆರವುಗೊಳಿಸಿ ಸಂಗ್ರಹವಾಗುತ್ತಿರುವ ಕಟ್ಟಡ ಭಗ್ನಾವಶೇಷಗಳನ್ನು 2 ಟ್ರ್ಯಾಕ್ಟರ್ ಗಳ ಮೂಲಕ ತೆರವುಗೊಳಿಸಲಾಗುತ್ತಿದೆ. ಜೆಸಿಬಿ ಹೋಗಲು ಸಾಧ್ಯವಾಗದಿರುವ ಕಡೆ ಸಿಬ್ಬಂದಿಯ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಅದಕ್ಕಾಗಿ 20 ಸಿಬ್ಬಂದಿಯು ಕಾರ್ಯನಿರ್ವಹಿಸುತ್ತಿರುತ್ತಾರೆ. ಸದರಿ ಸ್ಥಳದಲ್ಲಿ ನಾಳೆಯೂ ಒತ್ತುವರಿ ತೆರವು ಕಾರ್ಯಾಚರಣೆ ಪ್ರಕ್ರಿಯೆ ಮುಂದುವರಿಯಲಿದೆ.

ಯಲಹಂಕ ವಲಯ

ಯಲಹಂಕ ವಲಯಲ್ಲಿ ಇಂದು 2 ಒತ್ತುವರಿಗಳನ್ನು ತೆರವುಗೊಳಿಸಿದ್ದು, ಈ ಪೈಕಿ ಕುವೆಂಪುನಗರ ವಾರ್ಡ್ ಸಿಂಗಾಪುರ ಲೇಔಟ್ ನಲ್ಲಿ ಸರ್ವೇ ಸಂಖ್ಯೆ 97 ಹಾಗೂ 100 ರಲ್ಲಿ ಸಿಂಗಾಪುರ ಕೆರೆ ಹಿಂಭಾಗದಲ್ಲಿರುವ ಲ್ಯಾಂಡ್ ಮಾರ್ಕ್ ಅಪಾರ್ಟ್ಮ್ಂಟ್ ನಿಂದ 2.4 ಅಡಿ ಅಗಲ ಹಾಗೂ 75 ಮೀಟರ್ ಉದ್ದದ ತೂಬುಗಾಲುವೆ ಒತ್ತುವರಿ ಮಾಡಿಕೊಂಡಿದ್ದು, ತೂಬುಗಾಲವೆ ಮೇಲ್ಭಾಗದಲ್ಲಿ ನಿರ್ಮಿಸಿದ್ದ ಸೆಕ್ಯೂರಿಟಿ ಕೊಠಡಿಯನ್ನು ತೆರವುಗೊಳಿಸಲಾಗಿದೆ.

ಸಿಂಗಾಪುರ ಕೆರೆಯ ಬಳಿ ಸರ್ವೇ ಸಂಖ್ಯೆ 95 ರಲ್ಲಿ ಬಿಲ್ಡರ್ ಒಬ್ಬರು ಮಳೆ ನೀರುಗಾಲುವೆ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡಿದ್ದು, ಮಳೆ ನೀರು ಜಾಗವನ್ನು ಜಾಗವನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ.

ಬೊಮ್ಮನಹಳ್ಳಿ ವಲಯ

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಣನಕುಂಟೆ ವ್ಯಾಪ್ತಿಯ ಸರ್ವೇ ಸಂಖ್ಯೆ 29 ರಲ್ಲಿ ಒತ್ತುವರಿ ಮಾಡಿಕೊಂಡಿದ್ದ 11 ಒತ್ತುರಿಗಳಲ್ಲಿ, 1 ಕಮರ್ಷಿಯಲ್ ಆರ್‌ಸಿಸಿ ಕಟ್ಟಡದ ಭಾಗ, 8 ಶೆಡ್ ಹಾಗೂ 2 ಜಿಂಕ್ ಶೀಟ್ ಶೆಡ್ ಸೇರಿದಂತೆ ಸುಮಾರು 15 ಅಡಿ ಅಗಲ ಹಾಗೂ 330 ಅಡಿ ಉದ್ದದಷ್ಟು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದು, 1 ಜೆಸಿಬಿ, 1 ಹಿಟಾಚಿ, 2 ಟ್ರ್ಯಾಕ್ಟರ್ ಹಾಗೂ 15ಕ್ಕೂ ಹೆಚ್ಚು ಸಿಬ್ಬಂದಿಯ ಸಹಯೋಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಹೊಂಗಸಂದ್ರದಲ್ಲಿ 3 ಒತ್ತುವರಿಗಳ ಪೈಕಿ, 7.5 ಮೀಟರ್ ಜಾಗದಲ್ಲಿ 160 ಚ.ಅಡಿಯಷ್ಟು 1 ಕಟ್ಟಡ, 10 ಅಡಿಯ ಕಾಂಪೌಂಡ್ ಗೋಡೆ ಹಾಗೂ 4 X 10 ನ ಶೆಡ್ ಅನ್ನು 1 ಜೆಸಿಬಿ ಹಾಗೂ 10 ಸಿಬ್ಬಂದಿಯ ಸಹಯೋಗದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಮಹದೇವಪುರ ವಲಯ

ಮಹದೇವಪುರ ವಲಯ ಯಮಲೂರು ಬಳಿಯ ಎಪ್ಸಿಲಾನ್ ಹಿಂಭಾಗ ಬಳಿಯಿರುವ ಮುನೇಶ್ವರ ದೇವಸ್ಥಾನದ ಬಳಿ ಚರಂಡಿಯ ಮೇಲೆ ಅನಧಿಕೃತವಾಗಿ ಅಳವಡಿಸಿದ್ದ ಸ್ಲ್ಯಾಬ್ ಅನ್ನು ತೆರವುಗೊಳಿಸಲಾಗಿದೆ. ಮುನ್ನೆನಕೊಳಲು ಶಾಂತಿನಿಕೇತನ ಲೇಔಡ್ ನಲ್ಲಿ ದ್ದ 2 ಒತ್ತುವರಿಗಳ ಪೈಕಿ ರಾಜಕಾಲುವೆ ಸ್ಥಳದಲ್ಲಿ ನಿರ್ಮಿಸಿದ್ದ 2 ಶೆಡ್ ಗಳನ್ನು ತೆರವುಗೊಳಿಸಲಾಗಿದೆ.

ಸರ್ವೇ ಕಾರ್ಯ ಚುರುಕು

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ವಾಗ್ದೇವಿ ಲೇಔಟ್, ಮುನ್ನೇನಕೊಳಲು, ಕಸವನಹಳ್ಳಿ ಗ್ರಾಮ, ಎಬಿಕೆ ಗ್ರಾಮ, ಪ್ರೆಸ್ಟೀಜ್ ಟೆಕ್ ಪಾರ್ಕ್, ವಿಪ್ರೋ, ಸನ್ನಿ ಬ್ರೂಕ್ಸ್ ದೊಡ್ಡಕನ್ನಹಳ್ಳಿ, ಬೆಳ್ಳತ್ತೂರು ಗ್ರಾಮ, ಸದ್ರಮಂಗಲ ಗ್ರಾಮ, ಬೊಳ್ಳೆನಿನಿ ಸಾಸಾ ಅಪಾರ್ಟ್ಮೆಂಟ್ ಒಳಭಾಗ ಹಾಗೂ ಸಾಯಿಗಾರ್ಡನ್ ಲೇಔಟ್ ನಲ್ಲಿ ಪಾಲಿಕೆಯ ಅಧಿಕಾರಿಗಳು, ಭೂಮಾಪಕ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡುವ ಸಲುವಾಗಿ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

Related