ರಾಜ್ಯ ಮಾತ್ರವಲ್ಲ ಕೇಂದ್ರದಲ್ಲೂ ಆಪರೇಷನ್ ಕಮಲ ನಡೆಯುತ್ತಿದೆ: ದಿನೇಶ್ ಗುಂಡೂರಾವ್

ರಾಜ್ಯ ಮಾತ್ರವಲ್ಲ ಕೇಂದ್ರದಲ್ಲೂ ಆಪರೇಷನ್ ಕಮಲ ನಡೆಯುತ್ತಿದೆ: ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿಗೆ ಆಪರೇಷನ್ ಕಮಲ ಮತ್ತೆ ಶುರುವಾಗಿದೆ ಎಂದು ಬಿಸಿ ಬಿಸಿ ಚರ್ಚೆ ಪ್ರಾರಂಭವಾಗಿದ್ದು ಇದರ ಬೆನ್ನೆಲೆ ಸಚಿವ ದಿನೇಶ್ ಗುಂಡೂರಾವ್ ಅವರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಮಾತ್ರವಲ್ಲದೆ ಕೇಂದ್ರದಲ್ಲೂ ಆಪರೇಷನ್ ಕಮಲ ಮಾಡಲು ಬಿಜೆಪಿ ಸಜ್ಜಾಗಿದೆ ಎಂದು ಬಿಜೆಪಿಯ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದವರು, ಆಪರೇಷನ್ ಕಮಲ ಪ್ರಯತ್ನ ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಮಾಡ್ತಿದ್ದಾರೆ. ವಾಮಮಾರ್ಗದ ಮೂಲಕ ಹೇಗಾದ್ರೂ ಮಾಡಿ ಸರ್ಕಾರದಲ್ಲಿ ಇರಬೇಕು ಅನ್ನೋದು ಅವರ ಉದ್ದೇಶ. ಬಿಜೆಪಿಯವರು ಈ ದೇಶದ ರಾಜಕೀಯ ವ್ಯವಸ್ಥೆ ನಾಶ ಮಾಡ್ತಿದ್ದಾರೆ. ಜನ ಅವರನ್ನು ತಿರಸ್ಕಾರ ಮಾಡಿ ಸೋಲಿಸಿ ಮನೆಗೆ ಕಳಿಸಿದ್ದಾರೆ. ಅವರು ಜವಾಬ್ದಾರಿಯುತ ವಿಪಕ್ಷವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

 

Related