ಆನ್ ಲೈನ್ ಶಿಕ್ಷಣ ಸಿದ್ಧ

ಆನ್ ಲೈನ್ ಶಿಕ್ಷಣ ಸಿದ್ಧ

ಬೆಂಗಳೂರು-ಕೊರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಶಾಲೆಗಳನ್ನು ಮತ್ತೆ ಯಾವಾಗ ತೆರೆಯಬೇಕು? ಆನ್‌ಲೈನ್ ತರಗತಿಗೆ ಪೋಷಕರು ಸಿದ್ಧರಿದ್ದಾರೆಯೇ ಮೊದಲಾದ ವಿಷಯಗಳನ್ನು ತಿಳಿದುಕೊಳ್ಳುವ ಸಲುವಾಗಿ ನಗರದ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಸಂಸ್ಥೆ ಸಮೀಕ್ಷಾ ಕಾರ್ಯದಲ್ಲಿ ತೊಡಗಿದೆ.

ಈ ಸಂಸ್ಥೆ ಬೆಂಗಳೂರು ನಗರದಲ್ಲಿ ಈಗಾಗಲೇ ಸುಮಾರು ೨೦೦ ಶಾಲೆಗಳ ಮುಖ್ಯಸ್ಥರು ಹಾಗೂ ಸುಮಾರು ೮೦೦ ಪೋಷಕರನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಸಂಗ್ರಹಿಸಿದೆ. ಎಲ್‌ಕೆಜಿಯಿಂದ ೫ನೇ ತರಗತಿವರೆಗೆ ಆನ್‌ಲೈನ್ ತರಗತಿ ನಡೆಸಬೇಕು ಎಂದು ಬಹುತೇಕ ಮಂದಿ ಅಭಿಪ್ರಾಯಪಟ್ಟಿದ್ದಾರೆ. ಆನ್‌ಲೈನ್ ತರಗತಿ ನಡೆಸುವುದಾದರೆ ಅದಕ್ಕೆ ಬೇಕಾದ ಅಗತ್ಯದ ಲ್ಯಾಪ್ ಟಾಪ್, ಸ್ಮಾರ್ಟ್ಫೋನ್ ಒದಗಿಸಲು ತಾವು ಸಿದ್ಧ ಎಂದು ಬಹುತೇಕ ಪೋಷಕರು ಹೇಳಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ.

Related