ಪ್ರಜಾವಾಹಿನಿ ವರದಿಗೆ ಎಚ್ಚೆತ್ತ ಅಧಿಕಾರಿಗಳು

ಪ್ರಜಾವಾಹಿನಿ ವರದಿಗೆ ಎಚ್ಚೆತ್ತ ಅಧಿಕಾರಿಗಳು

ದಾಸರಹಳ್ಳಿ: ಶೆಟ್ಟಿಹಳ್ಳಿ ವಾರ್ಡ್ ವ್ಯಾಪ್ತಿಯ ಮೇದರಹಳ್ಳಿ ರಸ್ತೆಯಿಂದ ಚಿಕ್ಕಬಾಣವಾರ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆ ಕುರಿತು ಕೆಸರು ಗದ್ದೆಯಂತಾದ ರಸ್ತೆ ಭತ್ತದ ಪೈರು ನಾಟಿ ಮಾಡಿ ಸ್ಥಳಿಯರಿಂದ ಆರೋಪ ಎಂಬ ವರದಿ ಕುರಿತು ಪ್ರಜಾವಾಹಿನಿಯ ವಿಶೇಷ ವರದಿ ಮಾಡಿದ ಬೆನ್ನಲ್ಲೇ ಗುರುವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಧಿಕಾರಿಗಳು ಆರು ತಿಂಗಳ ಒಳಗೆ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಕಾವೇರಿ ನೀರಿನ ಪೈಪ್ ಅಳವಡಿಕೆಗಾಗಿ ರಸ್ತೆ ಅಗೆದು ದುರಸ್ತಿ ಕೈಗೊಳ್ಳದ ಹಿನ್ನೆಲೆ ಸ್ಥಳೀಯರು ಭತ್ತ ನಾಟಿ ಮಾಡಿ ಪ್ರತಿಭಟನೆಯನ್ನು ಮಾಡಲಾಗಿತ್ತು. ವರದಿಯನ್ನು ಪ್ರಜಾವಾಹಿನಿ ಪತ್ರಿಕೆಯ ಸಂಚಿಕೆಯಲ್ಲಿ ಕೆಸರು ಗದ್ದೆಯಂತಾದ ರಸ್ತೆ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು ದಾಸರಹಳ್ಳಿ ವಲಯ ಆಯುಕ್ತ ರವೀಂದ್ರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಕ್ಕೆ 12 ಕೋಟಿ ರೂ ವಿಶೇಷ ಅನುದಾನ ಬಳಸಿಕೊಂಡು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಿ ಮುಂದಿನ ಆರರಿಂದ ಏಳು ತಿಂಗಳ ಒಳಗೆ ಕಾಮಗಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ದಾಸರಹಳ್ಳಿ ವಲಯ ಜಂಟಿ ಆಯುಕ್ತ ಕೆ. ನರಸಿಂಹಮೂರ್ತಿ, ಬಿಬಿಎಂಪಿ ಅಧಿಕಾರಿಗಳು, ಇಂಜಿನಿಯರ್‌ಗಳು ಮುಂತಾದವರು ಇದ್ದರು.

Related