ಒತ್ತುವರಿ ತೆರವು ಕಾರ್ಯಾಚರಣೆ: ಮಾಲೀಕರ ಎಡವಟ್ಟು ಬಾಡಿಗೆದಾರರ ಪರದಾಟ

 ಒತ್ತುವರಿ ತೆರವು ಕಾರ್ಯಾಚರಣೆ: ಮಾಲೀಕರ ಎಡವಟ್ಟು ಬಾಡಿಗೆದಾರರ ಪರದಾಟ

ಬೆಂಗಳೂರು: ಮಾಹದೇವಪುರದ ಸ್ಪೈಸ್ ಗಾರ್ಡನ್ ಬಡವಾಣೆಯಲ್ಲಿ ಇಂದು ತೆರವಿಗೆ ಪಾಲಿಕೆ ಮುಂದಾಗಿದ್ದು ಮಾಲೀಕರು ರಾಜಕಾಲುವೇ ಮೇಲೆ ಅಕ್ರಮವಾಗಿ ಪಿಜಿ ಕಟ್ಟಡಗಳನ್ನ ನಾಲ್ಕು ಹಾಗೂ ಐದು ಅಂತಸ್ತಿನ್ನು ನಿರ್ಮಾಣ ಮಾಡಿದ್ದರಿಂದ ಪಾಲಿಕೆ ಒತ್ತುವರಿ ತೆರುವಿಗೆ ಮಾರ್ಕ್ ಮಾಡಿದ್ದಾರೆ.

ಒತ್ತುವರಿ ತೆರವು ಮಾಡುವುದಾಗಿ ಕೂಡಾ ಮೊದಲೆ ಹೇಳಿರು ಕೂಡ ಪಿಜಿ ಬಾಡಿಗೆದಾರರಿಗೆ ಈ ಬಗ್ಗೆ ಮಾಲೀಕರು ಯಾವುದೇ ಸೂಚನೆ ನೀಡಿಲ್ಲಆದ್ದರಿಂದ ಈಗ ಪಾಲಿಕೆ ಅಧಿಕಾರಿಗಳು ತೆರವಿಗೆ ಮಾಡುತ್ತಿರುವುದರಂದ ಬಾಡಿಗೆದಾರರ ಪರದಾಟ ಮನಮುಟ್ಟುವಂತಿದೆ. ಮಾಹಿತಿ ಇಲ್ಲ ಹೀಗಾ ಏಕಾಏಕಿ ಖಾಲಿ ಮಾಡಿ ಅಂತಿದ್ದಾರೆ ಅಂತಾ ಬೇಸರ ಆತಂಕದಲ್ಲಿಯೇ ಕೆಲಸಕ್ಕೆ ಹೊರಟ ಪಿಜಿ ಬಾಡಿಗೆದಾರರು.

ಹೌದು, ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಶುರುವಾಗಿದ್ದು ಮಹದೇವಪುರದ ಮುನೇನಕೊಳಲು ಬಳಿ ರಾಜಕಾಲುವೆ ಮೇಲೆಯೇ ಬೃಹತ್ ಕಟ್ಟಡಗಳ ನಿರ್ಮಾಣ ಮಾಡಲಾಗಿರುವುದು ಕಂಡು ಬಂದಿದೆ. ರಾಜಕಾಲುವೆಗಳ ಮೇಲೆಯೇ ಅಕ್ರಮವಾಗಿ ಐದಾರು ಅಂತಸ್ತಿನ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ.

ಸದ್ಯ ಈ ಅಕ್ರಮ ಕಟ್ಟಡಗಳಿಗೆ ಬಿಬಿಎಂಪಿ ಮಾರ್ಕ್​ ಹಾಕಿದೆ. ಸ್ಪೈಸ್​​ ಗಾರ್ಡನ್​ನಲ್ಲಿ ತೆರವು ಮಾಡುವ ಭಾಗದಲ್ಲಿ ಮಾರ್ಕ್​ ಮಾಡಲಾಗಿದೆ. ಎಸ್​ಡಬ್ಲ್ಯೂಡಿ ಬಿಲ್ಡಿಂಗ್ ನಂಬರ್ ಮಾರ್ಕ್ ಮಾಡಿ ತೆರವು ಕಾರ್ಯಾಚರಣೆಗೆ ಪ್ಲ್ಯಾನ್ ಮಾಡಿದ್ದಾರೆ.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್‌ನ ಹೊಯ್ಸಳ ನಗರದಲ್ಲಿ ಒತ್ತುವರಿ ತೆರವು ಕಾರ್ಯ ಬೆನ್ನಲ್ಲೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ನಾವು ಈ ಸ್ಥಳದಲ್ಲಿ ವಾಸವಾಗಿದ್ದೇವೆ. ಆದರೆ ಏಕಾಏಕಿ ಮಾರ್ಕ್ ಮಾಡಿ ತೆರವು ಮಾಡುತ್ತಿದ್ದಾರೆ. ನಮ್ಮ ಬಳಿಯೂ ದಾಖಲೆಗಳಿವೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ ಚಂದ್ರ, ಮಹಾದೇವಪುರ ವಲಯದಲ್ಲಿ ಹಾಗೂ ಕೆಆರ್​ ಪುರದಲ್ಲಿ ಎಲ್ಲಿ ರಾಜಕಾಲುವೆ ಇದೆ ಅಲ್ಲಿ ನೋಟಿಸ್​ ಕೊಡಲಾಗಿದೆ. ನೋಟಿಸ್​ ನಂತರ ಕೋರ್ಟ್​ನಿಂದ ಫೈನಲ್ ಆರ್ಡ್​ರ್ ಬಂದ ಮೇಲೆ ತೆರವು ಮಾಡಲಾಗುತ್ತಿದೆ. IT ಪಾರ್ಕ್,​ ಶಾಪಿಂಗ್​ ಕಂಪ್ಲೆಕ್ಸ್, ಮನೆಗಳಿದ್ದಾವೆ ಅದನ್ನ ತೆರವು ಮಾಡುತ್ತೇವೆ ಎಂದರು.

 

 

Related