ನೇಹಾ ಕೊಲೆ ಪ್ರಕರಣ; ರಾಜ್ಯ ಸರ್ಕಾರ ಕೊಲೆಗಾರರ ಬಗ್ಗೆ ಮೃದು ಧೋರಣೆ ತೋರುತ್ತಿದೆ: ನೇಹಾ ತಂದೆ

ನೇಹಾ ಕೊಲೆ ಪ್ರಕರಣ; ರಾಜ್ಯ ಸರ್ಕಾರ ಕೊಲೆಗಾರರ ಬಗ್ಗೆ ಮೃದು ಧೋರಣೆ ತೋರುತ್ತಿದೆ: ನೇಹಾ ತಂದೆ

ಹುಬ್ಬಳ್ಳಿ: ಎಂಸಿಎ ವಿದ್ಯಾರ್ಥಿ ನೇಹಾ ಹಿರೇಮಠ ಅವರು ಹುಬ್ಬಳ್ಳಿ ಕಾಲೇಜ್  ಬಿವಿಬಿ ಒಂದರಲ್ಲಿ ಅಮಾಯಕವಾಗಿ ಕೊಲೆ ಮಾಡಿರುವ ಬಗ್ಗೆ ಸಿಬಿಐಗೆ ತನಿಖೆ ಮಾಡಬೇಕೆಂದು ನೇಹಾ ಅವರ ತಂದೆ ನಿರಂಜನ್ ಹಿರೇಮಠ ಅವರು ಹೇಳಿದ್ದಾರೆ.

ಇನ್ನು ನೇಹಾ ಕುಟುಂಬಕ್ಕೆ ದೊಡ್ಡ ದೊಡ್ಡ ನಾಯಕರುಗಳು ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಇನ್ನು ಇದರ ಜೊತೆ ಕೇಂದ್ರ ನಾಯಕ ಜೆಪಿ ನಡ್ಡಾ ಅವರು ಕೂಡ ನಿನ್ನೆ ಭಾನುವಾರ ಸಂಜೆ ನೇಹಾ ಅವರ ಕುಟುಂಬ ಭೇಟಿ ಮಾಡಿ ಸಂತಾಪ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ನನ್ನ ಮಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃದು ಧೋರಣೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಕೊಲೆಯಾಗಿ ನಾಲ್ಕು ದಿನ ಕಳೆದಿದ್ದರೂ ಕೂಡ ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ಗಂಭೀರವಾಗಿ ತನಿಖೆ ಮಾಡುತ್ತಿಲ್ಲವೆಂದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಎಎನ್​​ಐ ಜೊತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎಂಟು ಜನ ಭಾಗಿಯಾಗಿದ್ದಾರೆ, ಅವರ ಹೆಸರನ್ನೂ ಹೇಳಿದ್ದೇನೆ. ಆದರೆ ಈವರೆಗೂ ಒಬ್ಬರನ್ನೂ ಬಂಧಿಸಿಲ್ಲ. ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದು, ಇವರ ಮೇಲೆ ವಿಶ್ವಾಸ ಕಳೆದುಕೊಂಡಿದ್ದೇನೆ. ಹೀಗಾಗಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ ತನಿಖೆಗೆ ನೀಡಿ ಎಂದು ಒತ್ತಾಯಿಸಿದರು.

ಸ್ಥಳೀಯ ಸರ್ಕಾರದಿಂದ ಸರಿಯಾಗಿ ತನಿಖೆಯಾಗದಿದ್ದರೇ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾಗುತ್ತದೆ. ರಾಜ್ಯದ ಪೊಲೀಸರ ಮೇಲಿದ್ದ ಭರವಸೆ ಕಳೆದುಕೊಂಡಿದ್ದೇನೆ. ಹುಬ್ಬಳ್ಳಿ-ಧಾರವಾಡ ಪೊಲೀಸ್​ ಕಮಿಷನರ್​ ಮಹಿಳೆ ಇದ್ದರೂ ಒಂದು ಹುಡುಗಿಯ ಕೊಲೆ ಆಗಿದೆ. ಮಹಿಳೆಯಾಗಿ ಒಂದು ಹುಡುಗಿಯ ಕೊಲೆ ಪ್ರಕರಣವನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ. ಬರುತ್ತಾರೆ, ನಿಮ್ಮ ಜೊತೆ ಇದ್ದೇವೆ ಅಂತ ಹೇಳುತ್ತಾರೆ. ಕಳೆದ ನಾಲ್ಕು ದಿನಗಳಿಂದ ಈ ಎರಡು ಮಾತುಗಳನ್ನು ಬಿಟ್ಟು ಬೇರೆ ಏನು ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related