ರಾಷ್ಟ್ರೀಯ ನಾಟಕೋತ್ಸವಕ್ಕೆ ತೆರೆ

ರಾಷ್ಟ್ರೀಯ ನಾಟಕೋತ್ಸವಕ್ಕೆ ತೆರೆ

ಮೈಸೂರು: ರಂಗಭೂಮಿ ವಾಣಿಜ್ಯೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಪಟ್ಟದಲ್ಲಿ ರಂಗಭೂಮಿ ಸೇರಿಸುವ ಅನಿವಾರ್ಯತೆ ಇದೆ ಎಂದು ಹಿರಿಯ ರಂಗ ನಿರ್ದೇಶಕ ಮೈಮ್ ರಮೇಶ್ ಹೇಳಿದ್ದಾರೆ.
ಜಿಪಿಐಆರ್ ತಂಡ ಮೈಸೂರಿನಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ರಂಗಭೂಮಿ ಮತ್ತು ಶಿಕ್ಷಣ ಕುರಿತಾದ ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡಿದರು.
ಇಲ್ಲದೆ ಅರಣ್ಯ ತಿರವಟ್ಟಿಗೆಗಳು ವಾಣಿಜ್ಯೀಕರಣ ಗೊಳ್ಳುತ್ತಿವೆ ಇದರಿಂದ ಇಡೀ ರಂಗಭೂಮಿಗೆ ವಾಣಿಜ್ಯ ಉದ್ಯಮವಾಗಿದೆ ರೂಪಗೊಳ್ಳುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಪಟ್ಟದಲ್ಲೇ ರಂಗ ಶಿಕ್ಷಣವನ್ನು ನೀಡಬೇಕು ಈ ಪ್ರಯತ್ನ ಈ ಹಿಂದೆ ಆರಂಭವಾಗಿದ್ದಾದರೂ ಅದಕ್ಕೊಂದು ಸ್ಪಷ್ಟ ರೂಪರೇಶ ಸಿದ್ಧವಾಗಿಲ್ಲ ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರಗಳು ಪ್ರಯತ್ನ ಮಾಡಬೇಕೆಂದು ಅವರು ಒತ್ತಿ ಹೇಳಿದರು.
30 ವರ್ಷಗಳ ಹಿಂದೆ ಆರಂಭವಾದ ಜಿಪಿಐಆರ್ ರಂಗ ತಂಡ ಸರ್ಕಾರದಿಂದ ಯಾವುದೇ ಅನುದಾನವನ್ನು, ಸಹಾಯವನ್ನು ಪಡೆಯದೆ ರಂಗ ಚಟುವಟಿಗಳನ್ನು ನಡೆಸುತ್ತಾ ಬಂದಿದೆ ಹಾಗೆಯೇ ರಂಗ ತರಬೇತಿ ಮೂಲಕ ಯುವ ಜನತೆಯಲ್ಲಿ ರಂಗ ಆಸಕ್ತಿಯನ್ನು ಮೂಡಿಸುತ್ತಾ ಬಂದಿದೆ ಇದು ಅಷ್ಟು ಸುಲಭವಾದ ಕೆಲಸವಲ್ಲ. ಇದೇ ರೀತಿ ಪ್ರಯತ್ನಗಳನ್ನು ನಡೆಸಿದ ಅನೇಕರಂಗ ತಂಡಗಳು ಈಗ ನಶಿಸಿಹೋಗಿವೆ ಅದರೊಳಗೆ ನಮ್ಮ ಸಂಸ್ಥೆ ಎಂದು ಹೇಳಿದರು.
ಜಿ ಪಿ ಐ ಇಆರ್ ರಂಗ ತಂಡ ಬಹಳ ಕಷ್ಟದಲ್ಲಿ ಆರಂಭವಾಗಿ ಈಗ ಸುಮಾರು 80ಕ್ಕೂ ಹೆಚ್ಚು ಕಲಾವಿದರೊಂದಿಗೆ ಉನ್ನತ ಮಟ್ಟದಲ್ಲಿ ಬೆಳೆದಿದೆ ಹೀಗಾಗಿ ವರ್ಷಕ್ಕೆ ಮೂರು ನಾಟಕಗಳನ್ನು ಸ್ವಂತ ಸಂಪನ್ಮೂಲದೊಂದಿಗೆ ನಡೆಸುತ್ತಾ ಬರುತ್ತಿದೆ ಎಂದು ಹೇಳಿದರು.
ರಂಗಾಯಣ ಉಪಾಧ್ಯಕ್ಷಿ ನಿರ್ಮಲ ಮಠಪತಿ ಮಾತನಾಡಿ, ಜಿಪಿಐಇಆರ್ ರಂಗತಂಡ ಈ ರಾಷ್ಟ್ರೀಯ ನಾಟಕೋತ್ಸವದ ಮೂಲಕ ಮಕ್ಕಳಲ್ಲಿ ರಂಗ ಶಿಕ್ಷಣದ ಅನಿವಾರ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ ಎಂದರು.
ಈ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಮೈಮ್ ರಮೇಶ್ ಅವರು ಅನೇಕ ವರ್ಷಗಳಿಂದ ರಂಗಸೇವೆಯಲ್ಲಿ ತೊಡಗಿದ್ದಾರೆ ಅವರು ಈಗಲೂ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದರೂ ರಂಗಭೂಮಿ ಮತ್ತು ಕಲೆಯಲ್ಲಿ ಅವರು ಆಗರ್ಭ ಶ್ರೀಮಂತರಾಗಿದ್ದಾರೆ ಎಂದು ಶ್ಲಾಘಿಸಿದರು.
ತಂಡದ ಹಿರಿಯ ಸದಸ್ಯರಾದ ಅಬ್ದುಲ್ ಕರೀಂ ಮಾತನಾಡಿ, ವಿವಿಧ ವೃತ್ತಿಗಳ ನಡುವೆಯೂ ರಂಗ ಚಟುವಟಿಕೆ ಅವಕಾಶವನ್ನಾಗಿಸಿ ಯಶಸ್ವಿಯಾಗುವುದು ಹೇಗೆ ಎನ್ನುವ ಬಗ್ಗೆ ಗೊಂದಲಗಳಿವೆ ಹಾಗೆ ಅನೇಕ ಯಶೋಗಾಥೆಗಳು ಇವೆ ಇದರ ನಡುವೆ. ಪಠ್ಯದಲ್ಲಿ ರಂಗ ಶಿಕ್ಷಣ ಹೇಗೆ ಅಳವಡಿಸಬೇಕು ಎನ್ನುವ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಗಂಭೀರ ಚರ್ಚೆಗಳಾಗಬೇಕು ಎಂದರು.
ಈ ಸಂದರ್ಭದಲ್ಲಿ ತಂಡದ ಹಿರಿಯ ಸದಸ್ಯ ಪತ್ರಕರ್ತ ಶಿವಕುಮಾರ್ ಬೆಳ್ಳಿತಟ್ಟೆ ಅವರನ್ನು ಗೌರವಿಸಲಾಯಿತು. ಇದೇವೇಳೆ ಹಿರಿಯರಂಗ ನಿರ್ದೇಶಕ ಎಚ್ಎಸ್ ಉಮೇಶ್ ಎಸ್ ಆರ್ ರಮೇಶ್ ಡಾಕ್ಟರ್ ಶೀಲಾ ಕುಮಾರಿ, ರಾಜೇಶ ತಲಕಾಡು ಲೋಹಿತ್ ಇದರೊಂದಿಗೆ ಐದು ದಿನಗಳ ರಾಷ್ಟ್ರೀಯ ನಾಟಕೋತ್ಸವಕ್ಕೆ ತೆರೆ ಎಳೆದಂತಾಗಿದೆ.

Related