ನಾಗರ ಪಂಚಮಿ ಆಚರಿಸಿದ ಮಹಿಳೆಯರು

ನಾಗರ ಪಂಚಮಿ ಆಚರಿಸಿದ ಮಹಿಳೆಯರು

ಕುಷ್ಟಗಿ: ತಾಲ್ಲೂಕಿನ ಮುದೇನೂರ್ ಗ್ರಾಮದಲ್ಲಿ ‘ನಾಗರ ಪಂಚಮಿ’ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹೆಸರೇ ಸೂಚಿಸುವಂತೆ ಈ ಹಬ್ಬದಂದು ಸರ್ಪಗಳನ್ನು ಬಹಳ ಭಕ್ತಿಯಿಂದ ಹಾಗೂ ವಿಶೇಷವಾಗಿ ಪೂಜಿಸಲಾಗುತ್ತದೆ. ಹಬ್ಬವನ್ನು ಪ್ರತೀ ವರ್ಷ ಶ್ರಾವಣ ತಿಂಗಳ ಶುಕ್ಲ ಪಕ್ಷದ ಪಂಚಮಿ ತಿಥಿಯಲ್ಲಿ ಆಚರಿಸುವುದು ಹಿಂದೂಗಳ ಸಂಪ್ರದಾಯ.

ಪಂಚಮಿ ಮಹತ್ವ:
ಕೃಷ್ಣನು ಕಾಳಿಂಗ ಸರ್ಪವನ್ನು ವಧಿಸಿದ ದಿನವನ್ನೇ ನಾಗರ ಪಂಚಮಿಯೆಂದು ಆಚರಿಸಲಾಗುತ್ತದೆ. ಒಮ್ಮೆ ಮಾತೃ ಶಾಪದಿಂದ ನಾಗಲೋಕವು ಬೆಂಕಿಯಿಂದ ಉರಿಯುತ್ತದೆ. ಬೆಂಕಿಯ ಉರಿಯನ್ನು ತಾಳಲಾರದೇ ಸರ್ಪಗಳು ಹಸುವಿನ ಹಾಲಿನಿಂದ ಸ್ನಾನವನ್ನು ಮಾಡಿದವು. ಹಸುವಿನ ಹಾಲು ಬೆಂಕಿಯಿಂದ ಸುಟ್ಟ ಉರಿಯನ್ನು ನಾಶಮಾಡುತ್ತದೆ. ಆದ್ದರಿಂದ ನಾಗರ ಪಂಚಮಿ ದಿನದಂದು ನಾಗಗಳಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಮಾನವರ ದೋಷಗಳು ನಿವಾರಣೆಯಾಗುತ್ತದೆ. ನಾಗಗಳಿಗೆ ಹಾಲಿನ ಅಭಿಷೇಕ ಮಾಡುವುದರಿಂದ ನಾಗಗಳಲ್ಲೇ ಶ್ರೇಷ್ಠವೆಂದು ಪರಿಗಣಿಸಲಾಗುವ ಶೇಷನಾಗ, ವಾಸುಕಿಯು ಆಶೀರ್ವಾದಿಸುತ್ತಾರೆ ಎನ್ನುವ ನಂಬಿಕೆಯಿದೆ.

ತಾಲ್ಲೂಕಿನ ಮುದೇನೂರ ಶ್ರೀ ವಿಜಯ ಚಂದ್ರಶೇಖರ್ ಸ್ವಾಮಿ ನಗರದಲ್ಲಿ ನಾಗರ ಪಂಚಮಿ ಪ್ರಯುಕ್ತ ನೀರೆಯರು ನಾಗಪ್ಪನಿಗೆ ಹಾಲು ಹಾಕುವುದರ ಮೂಲಕ ಹಬ್ಬವನ್ನು ಸಂಭ್ರಮಿಸಿದರು. ಕಾವೇರಿ, ನೀಲಮ್ಮ ಸುಂಕದ, ಸುಶ್ಮಿತಾ ಹೂಗಾರ್, ಮತ್ತಿತರ ಮಹಿಳೆಯರು ಪಾಲ್ಗೊಂಡಿದ್ದರು.

Related