‘ಮೈಲಾರಪ್ಪ ಅವರು ಚಿರಾಯು’

‘ಮೈಲಾರಪ್ಪ ಅವರು ಚಿರಾಯು’

ಶಹಾಪುರ :ಸಗರ ನಾಡಿನ ಕಂಚಿನ ಕಂಠದ ಗಾಯಕ, ದಿಟ್ಟ ಹೋರಾಟಗಾರ, ರೈತ ಸಂಘದ ಅಪ್ಪಟ ನಾಯಕ, ಜಾನಪದ ಆಕಾಡೆಮಿ ಪುರಸ್ಕøತರು ಜನತೆಯ ಕಷ್ಟ ಕರ್ಪಣ್ಯ ದೂರು ಮಾಡಲು ಜೀವನವನ್ನೇ ಮೂಡಿಪಿಟ್ಟ ರೈತ ಹೋರಾಟಗಾರ ಮೈಲಾರಪ್ಪ ಸಗರ ಅವರು ಮತ್ತೊಮ್ಮೆ ಹುಟ್ಟಿ ಬರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಹಿರಿಯ ರೈತ ಹೋರಾಟಗಾರ ದಿ. ಮೈಲಾರಪ್ಪ ಸಗರ ಅವರ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ 1980 ರಲ್ಲಿ ರೈತರ ಚಳುವಳಿಯನ್ನು ಪ್ರಾರಂಭಿಸಿ ಸಮಸ್ಯೆಗಳನ್ನು ಬಗೆ ಹರಿಸಲು ಸಾಕಷ್ಟು ಶ್ರಮಿಸಿದ್ದಾರೆ. ಹಾಡುಗಾರ ಅಷ್ಟೇ ಅಲ್ಲದೇ , ಹೋರಾಟದ ದಿಟ್ಟತನ, ಕಂಚಿನ ಕಂಠ ರೈತ ಚಳುವಳಿಗೆ ದೊಡ್ಡ ಶಕ್ತಿಯನ್ನು ತುಂಬಿತ್ತು. ಅವರೊಂದಿಗೆ ಧೀರ್ಘ ಕಾಲದ ಒಡನಾಟ ಇದೆ. ಸೌಮ್ಯ ಸ್ವಾಭಾವದ ವ್ಯಕ್ತಿಯಾಗಿದ್ದರು. ಈ ಭಾಗದ ಜನತೆಯ ಸಮಸ್ಯೆಗಳಿಗೆ ಚಳುವಳಿಯನ್ನು ನಡೆಸಿದ್ದಾರೆ. ಎಂದಿಗೂ ಅವರು ಚಿರಾಯು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಕಾಯ್ದೆಗಳನ್ನು ಜಾರಿ ಮಾಡಿ ರೈತರಿಗೆ ಮಾರಕವಾಗಿದೆ. ಭೂಮಿ, ಬೀಜ, ಕೆರೆ, ಹಳ್ಳ, ಮರಗಳೆಲ್ಲ ರೈತರಿಗೆ ಸೇರಿದ್ದು ಆದರೆ ಕಾರ್ಪೋರೇಟ್ ಕಂಪನಿಯವರು ಬಂದು ಒಕ್ಕುಲುತನ ಮಾಡಿದರೆ ರೈತರು ಎಲ್ಲಿಗೆ ಹೋಗಬೇಕು. ರೈತರ ಬದುಕು ಸಮಾಚಾರ ಚರ್ಚಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಂತರೆಡ್ಡಿ ಪಾಟೀಲ್, ಮಹೇಶಗೌಡ ಎಮ್ ಸುಬೇದರ, ಅಶೋಕಗೌಡ ಸುಬೇದಾರ್, ಕಾತೀಕ್ ಹೊಸಪೇಟ, ಬೈರೆಗೌಡ, ಬಸವಂತಪ್ಪ ಕಾಂಬ್ಳೆ, ಹನುಮಂತಪ್ಪ ಹೊಳೆಯಚೆ, ರೂಪ ಶ್ರೀನಿವಾಸ ನಾಯಕ್, ಬಸನಗೌಡ ಬಿರೆದಾರ್, ಗಗನ, ಮಲ್ಲನಗೌಡ ಹಗರಟಗಿ, ದೇವಿಂದ್ರಪ್ಪಗೌಡ ಪಾಟೀಲ್, ಬಸವರಾಜಪ್ಪ ಗೌಡ, ದೇವರಾಜ , ಶಿವಕುಮಾರ್ ಮಲ್ಲೇದ್, ಶಂಕರ ಪಡಶೆಟ್ಟಿ, ರಾಯಪ್ಪ ನಾಯ್ಕೊಡಿ, ಪದಾಧಿಕಾರಿಗಳು ಇದ್ದರು.

Related