ನನ್ನ ಮಗನೇ ಚಿರು ರೀತಿಯೇ ಕಾಣುತ್ತಾನೆ

ನನ್ನ ಮಗನೇ ಚಿರು ರೀತಿಯೇ ಕಾಣುತ್ತಾನೆ
ಬೆಂಗಳೂರು : ನನಗೆ ನನ್ನ ಮಗನೇ ಶಕ್ತಿ, ಸ್ಪೂರ್ತಿ. ಚಿರು ಎಲ್ಲಾ ನನ್ನ ಕೈಯಿಂದ ಮಾಡಿಸಿದ್ದಾರೆ. ಚಿರು ಅಗಲಿಕೆಯ ನೋವು ಮರೆಯೋದು ಅಸಾಧ್ಯ. ಮಗನನ್ನು ನೋಡಿದರೆ ಚಿರು ರೀತಿಯೇ ಕಾಣಿಸುತ್ತಿದ್ದಾರೆಂದು ನಟಿ ಮೇಘನಾ ರಾಜ್ ಹೇಳಿದ್ದಾರೆ.
ಮಗುವಿನ ತೊಟ್ಟಿಲ ಶಾಸ್ತ್ರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ದಿನಗಳ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಘನಾ ರಾಜ್. ಈ ವೇಳೆಯಲ್ಲಿ ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕೆಂಬುದನ್ನು ನಾನು ಚಿರುವಿನಿಂದ ಕಲಿತೆ. ಚಿರು ಅಂದರೆ, ನನ್ನ ಹ್ಯಾಪಿನೆಸ್. ಮಗನ ಆಗಮನ ಡಬಲ್ ಸಂಭ್ರಮ ಬಂದಿದೆ ಎಂದು ಹೇಳಿದ್ದಾರೆ.
ಇಂದಿನ ತೊಟ್ಟಿಲು ಶಾಸ್ತ್ರ ಹೊಸ ರೀತಿಯ ಸಂತೋಷವನ್ನು ತಂದಿದೆ. ಮಗ ಮನೆಗೆ ಬಂದಿದ್ದಾನೆ. ತುಂಬಾ ಖುಷಿಯಾಗಿದೆ. ತೊಟ್ಟಿಲು ತವರು ಮನೆಯಿಂದ ಬಂದಿದೆ. ಜನರು ನನ್ನನ್ನು, ಚಿರು ಹಾಗೂ ನಮ್ಮ ಕುಟುಂಬವನ್ನು ಮನೆಯವರಂತೆಯೇ ನೋಡಿಕೊಂಡಿದ್ದಾರೆ. ಇದೀಗ ನಾನು ಸ್ಟ್ರಾಂಗ್ ಇದ್ದೀನೋ, ಇಲ್ಲವೋ ಗೊತ್ತಿಲ್ಲ. ಆದರೆ, ಎಲ್ಲರೂ ಸ್ಟ್ರಾಂಗ್ ಆಗಿದ್ದೀನಿ ಎಂದು ಹೇಳುತ್ತಿದ್ದಾರೆ.
ಜೂನಿಯರ್ ಚಿರುವಿನ ತೊಟ್ಟಿಲು ಶಾಸ್ತ್ರವನ್ನು ಇಂದು ನೆರವೇರಿಸಲಾಯಿತು. ಜೆ.ಪಿ. ನಗರದ ಮೇಘನಾ ರಾಜ್‌ರ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ನಡೆದಿದ್ದು, ಕೇವಲ ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಸರಳವಾಗಿ ನಡೆಸಲಾಗಿದೆ.

Related