ಕ್ಷೇತ್ರದ ಜನರ ಆರೋಗ್ಯ ರಕ್ಷಣೆಯೇ ನನ್ನ ಗುರಿ : ಸತೀಶ್ ರೆಡ್ಡಿ

ಕ್ಷೇತ್ರದ ಜನರ ಆರೋಗ್ಯ ರಕ್ಷಣೆಯೇ ನನ್ನ ಗುರಿ : ಸತೀಶ್ ರೆಡ್ಡಿ

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪುಟ್ಟೇನಹಳ್ಳಿ ವಾರ್ಡ್ನಲ್ಲಿ ಕೋವಿಡ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರ್ಕಾರದ ಮುಖ್ಯ ಸಚೇತಕ ಹಾಗೂ ಶಾಸಕ ಎಂ.ಸತೀಶ್ ರೆಡ್ಡಿರವರು ಉದ್ಘಾಟಿಸಿದರು.

ಕ್ಷೇತ್ರದಲ್ಲಿ ಕೊರೋನಾ ೩ನೇ ಅಲೆ ಆತಂಕ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ತೊಂದರೆ ಆಗದಂತೆ ಜನರ ಆರೋಗ್ಯಕ್ಕಾಗಿ ಬಿಬಿಎಂಪಿ ಬೊಮ್ಮನಹಳ್ಳಿ ವತಿಯಿಂದ ೯ ವಾರ್ಡ್ಗಳ ಪೈಕಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದ ಜರಗನಹಳ್ಳಿ, ಮಂಗಮ್ಮನಪಾಳ್ಯ, ಪುಟ್ಟೇನಹಳ್ಳಿ ಭಾಗಗಳಲ್ಲಿ ಹೊಸದಾಗಿ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಕೊವಿಡ್ ೧ ಮತ್ತು ೨ನೇ ಅಲೆಯಲ್ಲಿ ಬಂದಿರುವ ಸಾಕಷ್ಟು ತೊಂದರೆಗಳನ್ನು ಮತ್ತೆ ೩ನೇ ಅಲೆ ಬಂದರೂ ಸಹ ಜನರ ಆರೋಗ್ಯವನ್ನು ಕಾಪಾಡುವ ಹಿತದೃಷ್ಠಿಯಿಂದ ವೈದ್ಯಕೀಯ ಸಂಬAಧ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಸಾಮಾನ್ಯ ಜನರು ಕೊರೋನಾ ಅಲ್ಲದೆ ಇನ್ನಿತರ ಆರೋಗ್ಯ ಸಮಸ್ಯೆಗಳ ತಪಾಸಣೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಾಗೂ ಕ್ಷೇತ್ರದಲ್ಲಿ ಶೇ.೮೦ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಪ್ರತಿಯೊಬ್ಬ ನಾಗರೀಕರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪುಟ್ಟೇನಹಳ್ಳಿ ವಾರ್ಡ್ನ ಮಾಜಿ ಪಾಲಿಕೆ ಸದಸ್ಯರುಗಳಾದ ರಮೇಶ್ (ಜೆಲ್ಲಿ), ಪ್ರತಿಭಾ ರಮೇಶ್, ಜಂಟಿ ಆಯುಕ್ತರಾದ ರಾಮಕೃಷ್ಣ, ಆರೋಗ್ಯ ಅಧಿಕಾರಿ ಬಾಲಚಂದ್ರ, ಡಾ. ನಾಗೇಂದ್ರ ಮತ್ತಿತರರು ಭಾಗವಹಿಸಿದ್ದರು.

Related