ಅಣಬೆಯಲ್ಲಡಗಿದೆ ಆರೋಗ್ಯದ ಗುಣಲಕ್ಷಣಗಳು

ಅಣಬೆಯಲ್ಲಡಗಿದೆ ಆರೋಗ್ಯದ ಗುಣಲಕ್ಷಣಗಳು

ಅಣಬೆ ಎಂದರೆ ಸಾಕು ಎಲ್ಲರೂ ಇಷ್ಟಪಡುತ್ತಾರೆ. ಕೆಲವರು ಸಾಂಬಾರು ಮಾಡಿ ತಿನ್ನಲು ಬಯಸುತ್ತಾರೆ. ಇನ್ನು ಕೆಲವರು ಹಾಗೆ ತಿನ್ನಲು ಇಷ್ಟಪಡುತ್ತಾರೆ. ಅಣಬೆ ತಿನ್ನುವುದರಿಂದ ನಮ್ಮಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಾವು ನಿವಾರಿಸಿಕೊಳ್ಳಬಹುದು.

ಸಕ್ಕರೆ ಕಾಯಿಲೆ ಇರುವಂತವರು ಕ್ರಮೇಣವಾಗಿ ಅಣಬೆಯನ್ನು ಸೇವಿಸುವುದರಿಂದ ಸಕ್ಕರೆ ರೋಗ ಕಡಿಮೆಯಾಗುತ್ತದೆ.

ಅಣಬೆಯಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಅಂಶಗಳೂ ತುಂಬಿಕೊಂಡಿವೆ. ಅಣಬೆಯಲ್ಲಿನ ಪ್ರೊಟೀನ್, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಆರೋಗ್ಯಕ್ಕೆ ಪೂರಕ. ಮಶ್ರೂಮ್ ನಲ್ಲಿ ದೇಹಕ್ಕೆ ಅಗತ್ಯವಾದ ಇನ್ನೂ ಹಲವು ಅಂಶಗಳಿವೆ.

ಶಕ್ತಿಯನ್ನು ನೀಡಲು ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ತುಂಬಾ ಅಗತ್ಯ. ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ2 ಮತ್ತು ಬಿ3 ಇರುವುದರಿಂದ ದೇಹಕ್ಕೆ ಇದು ಹೆಚ್ಚು ಅಗತ್ಯ. ಮಶ್ರೂಮ್ ನಲ್ಲಿ ಕೊಲೆಸ್ಟ್ರಾಲ್, ಬೊಜ್ಜಿನ ಅಂಶವಿಲ್ಲ ಮತ್ತು ಕಡಿಮೆ ಕಾರ್ಬೊ ಹೈಡ್ರೇಡ್ ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬೊಜ್ಜು ಕರಗಿಸುವುದು ಸುಲಭ.

ಇದರಲ್ಲಿನ ಕೆಲವು ಎಂಜೈಮು ಅಣಬೆ ಜೀರ್ಣವಾದ ನಂತರ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ. ಧುಮೇಹಿಗಳೂ ಕೂಡ ಅಣಬೆ ತಿನ್ನಬಹುದು. ಏಕೆಂದರೆ ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಸೇವನೆಯಿಂದ ತೊಂದರೆಯಿಲ್ಲ.

ಇದರಲ್ಲಿನ ನೈಸರ್ಗಿಕ ಇನ್ಸುಲಿನ್ ಮತ್ತು ಎಂಜೈಮುಗಳು ಸೇವಿಸಿದ ಆಹಾರದಲ್ಲಿನ ಸಕ್ಕರೆ ಮತ್ತು ಸ್ಟಾರ್ಚ್ ಅಂಶವನ್ನು ತೆಗೆದುಹಾಕುತ್ತದೆ. ಎರ್ಗೊಥಿಯಾನೈನ್ ಎಂಬ ಅತಿ ಶಕ್ತಿಯುತ ಆಂಟಿ ಯಾಕ್ಸಿಡಂಟ್ ಇದರಲ್ಲಿರುವದರಿಂದ ರೋಗಗಳಿಂದ ದೂರವಿರಿಸಲು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ.

 

Related