ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ಆನಂದ ನ್ಯಾಮಗೌಡ ತೀವ್ರ ತರಾಟೆ…

  • In Crime
  • July 20, 2022
  • 225 Views
ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ಆನಂದ ನ್ಯಾಮಗೌಡ ತೀವ್ರ ತರಾಟೆ…

ಜಮಖಂಡಿ, ಜು 20 : ತಾಲೂಕಿನ ಬಿಸಿಎಂ ಹಾಸ್ಟೆಲ್ಗಳಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಇನ್ನು ಶೌಚಗೃಹಗಳ ಅಧೋಗತಿಯನ್ನು ನೋಡಲಾಸಾಧ್ಯ. ಸರ‍್ಪಕವಾಗಿ ಬಲ್ಪ್ಗಳಿಲ್ಲ. ಇಂತಹ ಶೋಚನೀಯ ಪರಿಸ್ಥಿಯಲ್ಲಿ ನಿಮ್ಮ ಮಕ್ಕಳನ್ನು ಇಡುತ್ತೀರಾ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ  ಬಿಸಿಎಂ ಇಲಾಖೆಯ ಅಧಿಕಾರಿ  ಕಡಕೋಳರವರನ್ನು ಶಾಸಕ ಆನಂದ ನ್ಯಾಮಗೌಡ ತೀವ್ರ  ತರಾಟೆಗೆ ತೆಗೆದುಕೊಂಡರು.

ನಗರದ ತಾಪಂ ಸಭಾ ಭವನದಲ್ಲಿ ಬುಧವಾರ ನಡೆದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಕೆಲ ಅಧಿಕಾರಿಗಳ  ಮೇಲೆ ಶಾಸಕರು ಗರಂ ಆದರು. ಹಾಸ್ಟೆಲ್ ಗಳು ಸ್ಚಚ್ಚತೆಯಿಲ್ಲದೆ ಕೊಳಕು ವಾಸನೆ ಬರುವ ಹಾಗಿವೆ. ಒಂದು ವಾರದಲ್ಲಿ ಹಾಸ್ಟೆಲ್ಗಳಿಗೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಹಾಸ್ಟೆಲ್ಗಳು ಸ್ವಚ್ಛಗೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಹಿರೇಪಡಸಲಗಿ ಗ್ರಾಮದಲ್ಲಿ ಪಶು ಆಸ್ಪತ್ರೆ ಉದ್ಘಾಟನೆಯನ್ನು ಶಾಸಕರ ಗಮನಕ್ಕೆ ತರದೇ ಪಶು ಸಂಗೋಪನಾ ಇಲಾಖೆಯ ಸಹಾಯಕ ನರ‍್ದೇಶಕ ಸಿ.ಎಸ್. ನಿಂಬಾಳರವರು ನೆರವೇರಿಸಿರುವ ವಿಷಯ ಪ್ರಸ್ತಾಪವಾಗುತ್ತಿದ್ದಂತೆ, ಶಾಸಕರು, ನನ್ನ ಹಕ್ಕು ಚ್ಯುತಿ ಮಾಡಿದ್ದೀರಿ. ಎರಡು ರ‍್ಷಗಳ ಸತತ ಪ್ರಯತ್ನದಿಂದ ಪಶು ಆಸ್ಪತ್ರೆಯಲ್ಲಿ ತಾಲ್ಲೂಕಿಗೆ ತಂದಿದ್ದೇನೆ. ನನ್ನ ಗಮನಕ್ಕೆ ತಾರದೇ ಉದ್ಘಾಟಿಸಿರುವುದು ಸರಿಯೇ? ಎಂದು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಳೆಗಾಲ ಪ್ರಾರಂಭವಾಗಿದ್ದು, ಶಾಲಾ ಕೊಠಡಿಗಳು ಸೋರುತ್ತಿವೆ. ಅವುಗಳನ್ನು ಕೂಡಲೇ ದುರಸ್ತಿ ಮಾಡಿಸಿ ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಬಿಇಒ ಸಿ.ಎಂ.ನ್ಯಾಮಗೌಡ ಅವರಿಗೆ ಸೂಚಿಸಿದರು.

ಕುರಿಗಾಹಿಗಳಿಗೆ ಕುರಿಗಳನ್ನು ಮೇಯಿಸಲು ಸ್ಥಳಾವಕಾಶ ನೀಡಿ, ಅವರಿಗೆ ವಿನಾಕಾರಣ ತೊಂದರೆ ಕೊಡಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಹಂದಿ ಹಾಗೂ ಬಿಡಾಡಿ ದನಗಳ ಹಾವಳಿ ಉಂಟಾಗುತ್ತಿದೆ ಕೂಡಲೇ ಇದಕ್ಕೆ ಕಡಿವಾಣ ಹಾಕಿ, ಬಿಡಾಡಿ ಜಾನುವಾರುಗಳ ಮಾಲೀಕರಿಗೆ ತಿಳಿಹೇಳಿ. ಸಾಧ್ಯವಾಗದಿದ್ದಲೆ ಗೋಶಾಲೆಗಳಿಗೆ ಸೇರಿಸಿ ಎಂದು ಪೌರಾಯುಕ್ತ ಲಕ್ಷ್ಮೀ ಅಷ್ಟಗಿ ಅವರಿಗೆ ಸೂಚಿಸಿದರು.

ಸರ‍್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸದಿದ್ದರೆ ರೋಗಿಗಳ ಪರಸ್ಥಿತಿ ಏನಾಗುತ್ತದೆ. ರೋಗಿಗಳ ಬಗ್ಗೆ ಕಾಳಜಿ ಇರಲಿ. ಬೆಡ್ಗಳ ಮೇಲೆ ಬೆಡ್ಶೀಟ್ಗಳನ್ನು ನೀಡಬೇಕೆಂದು ಸಿಎಂಒ ಡಾ. ವೆಂಕಟರಾಜು ಅವರಿಗೆ ಸೂಚಿಸಿದರು. ಸಭೆಗೆ ಗೈರಾದ ಎಇಇ ಗಾಣಗೇರ ಅವರಿಗೆ ನೊಟಿಸ್ ತಾಪಂ ಇಒಂ ಶ್ರವಣಕುಮಾರ ನಾಯಕ ಅವರಿಗೆ ಸೂಚಿಸಿದರು. ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಮಾಹಿತಿ ಪತ್ರಿಕೆಯನ್ನು ಮುಂಚಿತವಾಗಿ ಸಲ್ಲಿಸಬೇಕು. ಅದು ಬಿಟ್ಟು ಸಭೆಯ ದಿನವೇ ಮಾಹಿತಿ ಪತ್ರಿಕೆ ನೀಡುವ ಪರಿಪಾಠ ಸರಿಯಲ್ಲ, ನಾವು ನಿಮಗೆ ಗೌರವ ಕೊಡುತ್ತೇವೆ. ರ‍್ತವ್ಯ ನಿಷ್ಠೆ, ಸರ‍್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವಂತೆ ಅಧಿಕಾರಿಗಳಿಗೆ ಶಾಸಕರು ಕಿವಿ ಮಾತು ಹೇಳಿದರು.  ಈ ವೇಳೆ ತಹಸೀಲ್ದಾರ ಸದಾಶಿವ ಮಕ್ಕೊಜಿ, ತಾಪಂ ಇಒ ಶ್ರವಣಕುಮಾರ ನಾಯಕ ಇದ್ದರು.

ಪತ್ರರ‍್ತರ ಹಾಗೂ  ಸರ‍್ವಜನಿಕರ ಜೊತೆ ಸರಿಯಾಗಿ ಸ್ಪಂದಿಸದೆ ಅನುಚಿತವಾಗಿ ರ‍್ತನೆ ಮಾಡಿದ  ಬಿಸಿಎಂ ಅಧಿಕಾರಿ ರಾಜು ಕಡಕೋಳಗೆ ಶಾಸಕರು ತರಾಟೆ ತಗೆದುಕೊಂಡರಲ್ಲದೇ  ಅವರ ಮೇಲೆ ಕ್ರಮ ಜರುಗಿಸುವಂತೆ ಶಾಸಕ ಆನಂದ ನ್ಯಾಮಗೌಡ ಅವರು ತಾಪಂ ಇಒ  ಅವರಿಗೆ ಸೂಚಿಸಿದರು.

ನಡೆದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಕೆಲ ಅಧಿಕಾರಿಗಳ ಮೇಲೆ ಶಾಸಕರು ಗರಂ ಆದರು. ಹಾಸ್ಟೆಲ್ ಗಳು ಸ್ಚಚ್ಚತೆಯಿಲ್ಲದೆ ಕೊಳಕು ವಾಸನೆ ಬರುವ ಹಾಗಿವೆ. ಒಂದು ವಾರದಲ್ಲಿ ಹಾಸ್ಟೆಲ್ಗಳಿಗೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಹಾಸ್ಟೆಲ್ಗಳು ಸ್ವಚ್ಛಗೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಹಿರೇಪಡಸಲಗಿ ಗ್ರಾಮದಲ್ಲಿ ಪಶು ಆಸ್ಪತ್ರೆ ಉದ್ಘಾಟನೆಯನ್ನು ಶಾಸಕರ ಗಮನಕ್ಕೆ ತರದೇ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎಸ್. ನಿಂಬಾಳರವರು ನೆರವೇರಿಸಿರುವ ವಿಷಯ ಪ್ರಸ್ತಾಪವಾಗುತ್ತಿದ್ದಂತೆ, ಶಾಸಕರು, ನನ್ನ ಹಕ್ಕು ಚ್ಯುತಿ ಮಾಡಿದ್ದೀರಿ. ಎರಡು ವರ್ಷಗಳ ಸತತ ಪ್ರಯತ್ನದಿಂದ ಪಶು ಆಸ್ಪತ್ರೆಯಲ್ಲಿ ತಾಲ್ಲೂಕಿಗೆ ತಂದಿದ್ದೇನೆ. ನನ್ನ ಗಮನಕ್ಕೆ ತಾರದೇ ಉದ್ಘಾಟಿಸಿರುವುದು ಸರಿಯೇ? ಎಂದು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮಳೆಗಾಲ ಪ್ರಾರಂಭವಾಗಿದ್ದು, ಶಾಲಾ ಕೊಠಡಿಗಳು ಸೋರುತ್ತಿವೆ. ಅವುಗಳನ್ನು ಕೂಡಲೇ ದುರಸ್ತಿ ಮಾಡಿಸಿ ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಬಿಇಒ ಸಿ.ಎಂ.ನ್ಯಾಮಗೌಡ ಅವರಿಗೆ ಸೂಚಿಸಿದರು.


ಗಣಿ-ಬುದ್ನಿ ರಸ್ತೆ ಬಹಳಷ್ಟು ಹದಗೆಟ್ಟಿದೆ, ಸರ್ಕಾರದಿಂದ ಅನುದಾನ ತಂದರೂ ನೀವು ಕೆಲಸ ಮಾಡಲು ಒಂದು ವರ್ಷ ಕಾಲಾವಕಾಶದ ಅವಶ್ಯಕತೆ ಏನಿದೆ. ಕರ್ತವ್ಯ ನಿರ್ಲಕ್ಷö್ಯ ತೋರಿದರೆ ಬೇರೆಡೆಗೆ ವರ್ಗಾಯಿಸಿಕೊಳ್ಳಿ ಎಂದು ಜಿ.ಪಂ. ಎಇಇ ರಾಮಪ್ಪ ರಾಠೋಡರವರಿಗೆ ಎಚ್ಚರಿಕೆ ನೀಡಿದರು.
ಕುರಿಗಾಹಿಗಳಿಗೆ ಕುರಿಗಳನ್ನು ಮೇಯಿಸಲು ಸ್ಥಳಾವಕಾಶ ನೀಡಿ, ಅವರಿಗೆ ವಿನಾಕಾರಣ ತೊಂದರೆ ಕೊಡಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಹಂದಿ ಹಾಗೂ ಬಿಡಾಡಿ ದನಗಳ ಹಾವಳಿ ಉಂಟಾಗುತ್ತಿದೆ ಕೂಡಲೇ ಇದಕ್ಕೆ ಕಡಿವಾಣ ಹಾಕಿ, ಬಿಡಾಡಿ ಜಾನುವಾರುಗಳ ಮಾಲೀಕರಿಗೆ ತಿಳಿಹೇಳಿ. ಸಾಧ್ಯವಾಗದಿದ್ದಲೆ ಗೋಶಾಲೆಗಳಿಗೆ ಸೇರಿಸಿ ಎಂದು ಪೌರಾಯುಕ್ತ ಲಕ್ಷ್ಮೀ ಅಷ್ಟಗಿ ಅವರಿಗೆ ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸದಿದ್ದರೆ ರೋಗಿಗಳ ಪರಸ್ಥಿತಿ ಏನಾಗುತ್ತದೆ. ರೋಗಿಗಳ ಬಗ್ಗೆ ಕಾಳಜಿ ಇರಲಿ. ಬೆಡ್ಗಳ ಮೇಲೆ ಬೆಡ್ಶೀಟ್ಗಳನ್ನು ನೀಡಬೇಕೆಂದು ಸಿಎಂಒ ಡಾ. ವೆಂಕಟರಾಜು ಅವರಿಗೆ ಸೂಚಿಸಿದರು.

ಸಭೆಗೆ ಗೈರಾದ ಎಇಇ ಗಾಣಗೇರ ಅವರಿಗೆ ನೊಟಿಸ್ ತಾಪಂ ಇಒಂ ಶ್ರವಣಕುಮಾರ ನಾಯಕ ಅವರಿಗೆ ಸೂಚಿಸಿದರು. ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಮಾಹಿತಿ ಪತ್ರಿಕೆಯನ್ನು ಮುಂಚಿತವಾಗಿ ಸಲ್ಲಿಸಬೇಕು. ಅದು ಬಿಟ್ಟು ಸಭೆಯ ದಿನವೇ ಮಾಹಿತಿ ಪತ್ರಿಕೆ ನೀಡುವ ಪರಿಪಾಠ ಸರಿಯಲ್ಲ, ನಾವು ನಿಮಗೆ ಗೌರವ ಕೊಡುತ್ತೇವೆ. ಕರ್ತವ್ಯ ನಿಷ್ಠೆ, ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವAತೆ ಅಧಿಕಾರಿಗಳಿಗೆ ಶಾಸಕರು ಕಿವಿ ಮಾತು ಹೇಳಿದರು. ಈ ವೇಳೆ ತಹಸೀಲ್ದಾರ ಸದಾಶಿವ ಮಕ್ಕೊಜಿ, ತಾಪಂ ಇಒ ಶ್ರವಣಕುಮಾರ ನಾಯಕ ಇದ್ದರು.

ಪತ್ರಕರ್ತರ ಹಾಗೂ ಸಾರ್ವಜನಿಕರ ಜೊತೆ ಸರಿಯಾಗಿ ಸ್ಪಂದಿಸದೆ ಅನುಚಿತವಾಗಿ ವರ್ತನೆ ಮಾಡಿದ ಬಿಸಿಎಂ ಅಧಿಕಾರಿ ರಾಜು ಕಡಕೋಳಗೆ ಶಾಸಕರು ತರಾಟೆ ತಗೆದುಕೊಂಡರಲ್ಲದೇ ಅವರ ಮೇಲೆ ಕ್ರಮ ಜರುಗಿಸುವಂತೆ ಶಾಸಕ ಆನಂದ ನ್ಯಾಮಗೌಡ ಅವರು ತಾಪಂ ಇಒ ಅವರಿಗೆ ಸೂಚಿಸಿದರು.

Related