ವಿದ್ಯುತ್ ಬಿಲ್ ಪಾವತಿಸದ ಸಚಿವ

ವಿದ್ಯುತ್ ಬಿಲ್ ಪಾವತಿಸದ ಸಚಿವ

ಗದಗ : ಗದಗ ಹೊಸ ಬಸ್ ನಿಲ್ದಾಣ ಬಳಿಯಲ್ಲಿರುವ ಸಚಿವ ಶ್ರೀರಾಮಲು ಅವರ ಮನೆಯ ವಿದ್ಯುತ್ ಬಿಲ್ ಕಟ್ಟಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಸುಮಾರು 3 ತಿಂಗಳಿಂದ 95 ಸಾವಿರಕ್ಕೂ ಹೆಚ್ಚು ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪಕ್ಕೆ ಸಚಿವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದು ಕಾದು ನೋಡಬೇಕಾಗಿದೆ. ಇದಲ್ಲದೇ ತಮ್ಮ ಮನೆಯ ಮೇಲು ಉಸ್ತುವಾರಿ ನೋಡಿಕೊಳ್ಳುವವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂತ ಕಂಡು ಬರುತ್ತಿದೆ. ಏನೇ ಆಗಲಿ ತಮ್ಮ ಮನೆಯ ವಿದ್ಯುತ್ ಬಿಲ್ ಬಾಕಿ ಪಾವತಿ ಮಾಡದೇ ಇರುವುದು ಅದು ಶ್ರೀರಾಮುಲು ಅವರ ತಪ್ಪಾಗಿದೆ ಹೊರತು ಬೇರೆಯವರ ತಪ್ಪಲ್ಲ.

Related