“ಹೊಲಕ್ಕೊಂದು ಬದು ನಿರ್ಮಾಣ” ಅಭಿಯಾನಕ್ಕೆ ಸಚಿವ ಬಿಸಿ ಪಾಟೀಲ್ ಚಾಲನೆ

“ಹೊಲಕ್ಕೊಂದು ಬದು ನಿರ್ಮಾಣ” ಅಭಿಯಾನಕ್ಕೆ ಸಚಿವ ಬಿಸಿ ಪಾಟೀಲ್ ಚಾಲನೆ

ಗಂಗಾವತಿ : ತಾಲೂಕಿನ ಮಲಕನಮರಡಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ ಸಿ. ಪಾಟೀಲ್ ರವರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ರೈತರ ಪ್ರತಿ ಹೊಲದಲ್ಲಿ ಬದು ನಿರ್ಮಾಣ, ರೈತನ ಮುಖದಲ್ಲಿ ನಗು, ಪ್ರತಿ ಕುಟುಂಬಕ್ಕೂ ಕೆಲಸ, ಪ್ರತಿ  ಹೊಲಕ್ಕೊಂದು ಬದು ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಕೃಷಿ ಸಚಿವ ಬಿ ಸಿ. ಪಾಟೀಲ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗೆ ಈಗಾಗಲೇ ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಉದ್ಯೋಗ ಖಾತ್ರಿ ಯೋಜನೆಗೆ ಬಿಡುಗಡೆಗೊಳಿಸಿದ್ದಾರೆ.

ಈ ನಿಟ್ಟಿನಲ್ಲಿ ನಮ್ಮ ಸರ್ಕಾರ  ಜನಪರ, ರೈತಪರ, ಕೃಷಿ ಕೂಲಿ ಕಾರ್ಮಿಕರ ಪರವಾಗಿದ್ದು, ಯೋಜನೆಯಲ್ಲಿ ಕೈಗೆ  ಕೆಲಸ, ಹೊಟ್ಟೆಗೆ  ಅನ್ನ ನೀಡಿ  ರೈತರಿಗೆ ಅನುಕೂಲವಾಗುವ  ಉದ್ದೇಶದಿಂದ  ಅವರ ಹೊಲಗಳಲ್ಲಿ  ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳನ್ನು ನರೇಗಾ ಯೋಜನೆಯಲ್ಲಿ ಕೈಗೆತ್ತಿಕೊಂಡಿದ್ದೇವೆ.

ಇನ್ನು ನೈಸರ್ಗಿಕ ಸಂಪತ್ತು ಉಳಿವಿಗಾಗಿ,  ಕೃಷಿ ಹೊಂಡಗಳನ್ನು ರೈತರ ಹೊಲದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ರೈತರ ಹೊಲದಲ್ಲಿ ಅಂತರ್ಜಲ ಹೆಚ್ಚಳ ಮಾಡುವ ಕೆಲಸಗಳನ್ನು ಮಾಡಲಾಗುತ್ತಿದೆ. ಅದೇ ರೀತಿಯಾಗಿ ಈ ಭಾಗದ ರೈತರ ಹಣ್ಣು, ತರಕಾರಿ  ಬೆಳೆಗಳ ಪರಿಹಾರಕ್ಕಾಗಿ ರಾಜ್ಯ ಸರ್ಕಾರ   ಕೊರೋನಾ ವೈರಸ್ ಪ್ಯಾಕೇಜ್ನ ಹೆಸರಿನಲ್ಲಿ 165 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

Related