ಜಿಲ್ಲಾಧಿಕಾರಿ ವಿರುದ್ಧ ಸಚಿವ ಆರೋಪ!

ಜಿಲ್ಲಾಧಿಕಾರಿ ವಿರುದ್ಧ ಸಚಿವ ಆರೋಪ!

ಮೈಸೂರು : ಜಿಲ್ಲೆಯಲ್ಲಿ  ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿದ್ದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದ ಮಾಜಿ ಸಚಿವ ಹಾಗೂ ಜೆಡಿಎಸ್​ ಶಾಸಕ ಸಾರಾ ಮಹೇಶ್,​ ರೋಹಿಣಿ ಸಿಂಧೂರಿ ವಿರುದ್ಧ ಹಗರಣದ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಶಾಸಕರು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿ, ರೋಹಿಣಿ ಸಿಂಧೂರಿ, ಮೈಸೂರು ಡಿಸಿ ಆಗುವುದಕ್ಕೂ ಮುಂಚೆ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿದ್ದರು. ಆಂಧ್ರಪ್ರದೇಶದ ತಿರುಮಲದಲ್ಲಿ ವಸತಿ ಗೃಹ, ಕಲ್ಯಾಣ ಮಂಟಪ ಹಾಗೂ ಮೂಲಸೌಕರ್ಯ ಕಲ್ಪಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು.

200 ಕೋಟಿ ರೂ. ಕಾಮಗಾರಿಯ ನಿರ್ಮಾಣ, ನಿರ್ವಹಣೆಯನ್ನು ಟಿಟಿಡಿಗೆ ರಾಜ್ಯ ಸರ್ಕಾರ ವಹಿಸಿದೆ. ಆರ್ಕಿಟೆಕ್ಚರ್, ಲ್ಯಾಂಡ್‌ಸ್ಕೇಪಿಂಗ್ ಮತ್ತು ಇಂಟೀರಿಯರ್ ವಿನ್ಯಾಸದ ಕೆಲಸವನ್ನು ಮೆ. ಗಾಯತ್ರಿ ಆಯಂಡ್ ನಮಿತ್ ಆರ್ಕಿಟೆಕ್ಟ್ಸ್ ಅವರಿಗೆ ನೀಡಲಾಗಿದೆ. ಇದಕ್ಕಾಗಿ ಸಾರ್ವಜನಿಕ ಸಂಗ್ರಹಣೆಯ ಪಾರದರ್ಶಕತೆ ಕಾಯ್ದೆ 1999ರ ಅಡಿ ವಿನಾಯಿತಿ ಕೂಡ ನೀಡಲಾಗಿದೆ.

ಅಂದ್ರೆ ಈ ಮೂಲಕ 10 ಕೋಟಿ ರೂ. ನೀಡಲಾಗಿದೆ. ನಮ್ಮಲ್ಲಿ ಹಾಗೂ ನಮ್ಮ ಸರ್ಕಾರದಲ್ಲಿ ಆರ್ಕಿಟೆಕ್ಟ್, ವಿನ್ಯಾಸಗಾರರೇ ಇಲ್ಲವೇ? ಬೇರೆ ರಾಜ್ಯದವರಿಗೇಕೆ ನೀಡಬೇಕಿತ್ತು? ಎಂದು ಸಾ.ರಾ.ಮಹೇಶ್ ಪ್ರಶ್ನಿಸಿದರು.

Related