ಮಿನಿಬಸ್ ಡಿಕ್ಕಿ : 6 ಮಂದಿಗೆ ಗಾಯ

ಮಿನಿಬಸ್ ಡಿಕ್ಕಿ : 6 ಮಂದಿಗೆ ಗಾಯ

ತುಮಕೂರು, ಫೆ. 24 : ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಮಿನಿಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ 6 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲೇನಹಳ್ಳಿಗೇಟ್ ಬಳಿ ಸಂಭವಿಸಿದೆ. ಬೆಂಗಳೂರು ಮೂಲದ ಮಿನಿಬಸ್ ಚಾಲಕ ಕಿಶೋಶ್(40) ಪೂಜಾ(30) ಮೃತಪಟ್ಟ ದುರ್ದೈವಿಗಳು.
ಸುಮಾರು 15 ಮಂದಿ ಮಿನಿಬಸ್ನಲ್ಲಿ ಪ್ರವಾಸಕ್ಕೆ ತೆರಳಿ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾಗ 4.30ರ ಸಂದರ್ಭದಲ್ಲೇ ಬಾಲೇನಹಳ್ಳಿ ಗೇಟ್ ಬಳಿ ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

Related