ಭೂಸ್ವಾದೀನ ಕುರಿತು ಕೈಗಾರಿಕಾ ಸಚಿವರ ಜೊತೆ ಸಭೆ

ಭೂಸ್ವಾದೀನ ಕುರಿತು ಕೈಗಾರಿಕಾ ಸಚಿವರ ಜೊತೆ ಸಭೆ

ಬೆಂಗಳೂರು: ಬೃಹತ್ ಕೈಗಾರಿಕೆಗಳ ಇಲಾಖೆ ವತಿಯಿಂದ ಭೂಸ್ವಾದೀನಪಡಿಸಿಕೋಂಡು ಕೈಗಾರಿಕೆಗಳ ನಿರ್ಮಾಣಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿಇಂದು ಮಾನ್ಯ ಬೃಹತ್ ಮತ್ತು  ಮಾದ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯಗಳ ಸಚಿವರಾದ ಎಂ.ಬಿ ಪಾಟೀಲ್ ರವರ ಉಪಸ್ಥಿತಿ ಯಲ್ಲಿ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್ ಮುನಿಯಪ್ಪನವರ ನೇತೃತ್ವದಲ್ಲಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹಾಗೂ ಚನ್ನಹಳ್ಳಿ ಗ್ರಾಮ ಪಂಚಾಯತಿಯ ರೈತರೊಂದಿಗೆ ಸಭೆಯನ್ನು ನಡೆಸಲಾಯಿತು.

ಸರ್ಕಾರವು ಇಂದು ಚನ್ನರಾಯಪಟ್ಟಣ ಹಾಗೂ ಚನ್ನಹಳ್ಳಿ, ನಲ್ಕೂರು ಗ್ರಾಮ ಪಂಚಾಯತಿಯ ಸುಮಾರು 13 ಹಳ್ಳಿಗಳ ರೈತರ 1777 ಎಕರೆ ಜಮೀನನ್ನು ಸರ್ಕಾರವು ಕೆಐಡಿಬಿ ಯಿಂದ ಸ್ವಾದೀನ ಪಡಿಸಿಕೊಳ್ಳಲು ರೈತರಿಗೆ ನೋಟೀಸ್ ನೀಡಿರುವ ಹಿನ್ನಲೆಯಲ್ಲಿ ಇಂದು ಖನಿಜ ಭವನದಲ್ಲಿ ರೈತರ ಅಭಿಪ್ರಾಯಗಳನ್ನು ಮಾನ್ಯ ಸಚಿವರು ಸಂಗ್ರಹಿಸಿದರು.

ಚನ್ನರಾಯಪಟ್ಟಣದಲ್ಲಿ ಸುಮಾರು 600 ದಿನಗಳಿಂದ ರೈತರು ಧರಣಿ ನಡೆಸುತ್ತಿರುವ ಹಿನ್ನಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಇದರ ಸವಿವಿವರವಾದ ಮಾಹಿತಿಯನ್ನು ನೀಡಿ, ಇದನ್ನು ಕೈ ಬಿಡಬೇಕು ಎಂದು ಸಚಿವರ ಮುಂದೆ ರೈತರು ಮನವಿ ಮಾಡಿದರು.

ನಂತರ ಮಾತನಾಡಿದ ಸಚಿವರು, ನಾನು ರೈತ ಕುಟುಂಬದಿಂದ ಬಂದಿರುವ ಹಿನ್ನಲೆಯಲ್ಲಿ ನನಗೂ ರೈತರ ಸಂಕಷ್ಟ ಗೊತ್ತಿರುವ ಕಾರಣ ನಾನು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಇದಕ್ಕೆ ಸೂಕ್ತವಾದ ಪರಿಹಾರ ಕೊಂಡುಕೊಳ್ಳುತ್ತೇನೆ ಎಂದರು .

ಸಭೆಯಲ್ಲಿ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ, ನಾರಾಯಣಸ್ವಾಮಿ, ಬೃಹತ್ ಮತ್ತು ಮಧ್ಯಮ ಕೈಗಾರಿಗಳ ಅಪರ ಮುಖ್ಯಕಾರ್ಯದರ್ಶಿ ಸೆಲ್ವಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಡಾ.ಶಿವಶಂಕರ್, ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

Related