ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಿ

  • In State
  • September 5, 2021
  • 427 Views
ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಿ

ಔರಾದ: ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಚಿವರಿಗೆ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಪದ್ಮಾವತಿ ಅಂಗನವಾಡಿ ನೌಕರರು ಶನಿವಾರ ಸಚಿವರಿಗೆ ಮನವಿ ಸಲ್ಲಿಸಿದರು.
ಕೊರೊನ ವಾರಿಯರ್ಸ್ ಆಗಿ 59 ಜನರು ಬಲಿಯಾಗಿದ್ದಾರೆ. ರಾಜ್ಯದ ಹೈಕೋರ್ಟ್ ರಾಜ್ಯದಲ್ಲಿ ಮನೆಗೆ ಆಹಾರ ತಲುಪಿಸಬೇಕು ಎಂದು ನಿರ್ದೇಶನ ಕೊಟ್ಟಗಾ ಅಂಗನವಾಡಿ ನೌಕರರು ಯಾವುದೇ ಸಂರಕ್ಷಣೆ ಇಲ್ಲದಿದ್ದರೂ ಆಹಾರ ಪದಾರ್ಥಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ. ಐಸಿಡಿಎಸ್ 6 ನೇ ಉದ್ದೇಶಗಳ ಜೊತೆಗೆ ಭಾಗ್ಯಲಕ್ಷ್ಮಿ, ಸ್ತ್ರೀಶಕ್ತಿ, ಚುನಾವಣಾ ಕೆಲಸಗಳ ಆರೋಗ್ಯ ಇಲಾಖೆ, ಅಂಗವಿಕಲರ, ಹಿರಿಯ ಸಬಲೀಕರಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯ, ಕೆಲಸಗಳನ್ನು ನಿರಂತರವಾಗಿ ಮಾಡಿಸಲಾಗುತ್ತಿದೆ.
ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಟ್ಟು ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಬೇಡಿಕೆ ಇಟ್ಟರು. ಶಿಶುಪಾಲನ ಕೇಂದ್ರಗಳನ್ನು ಸ್ಥಾಪಿಸುವ ಅವೈಜ್ಞಾನಿಕ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ದೋರಣೆಯನ್ನು ವಿರೋಧಿಸಿ ಮಾರ್ಚ್ 2020 ರಿಂದ ನಿರಂತರವಾಗಿ ಮನವಿ ಪತ್ರಿಕೆ ಸಲ್ಲಿಕೆ ಸಂಬAಧಿಸಿದ ಅಧಿಕಾರಿಗಳು ಸಚಿವರ ಬಳಿ ಚರ್ಚೆಗಳು ಧರಣಿ ಪ್ರತಿಭಟನೆ ಮಾಡಿದ್ದರು, ಕೂಡ ಸರ್ಕಾರ ಅನುದಾನ ನೀಡುತ್ತಿಲ್ಲ ಆದ್ದರಿಂದ ತಾವುಗಳು ಈ ಬೇಡಿಕೆಗಳು ಬಗ್ಗೆ ಸೆಪ್ಟೆಂಬರ್ ರಿಂದ ನಡೆಯುತ್ತಿರುವ ವಿಧಾನಸಭೆ ರಾಜ್ಯಸಭೆಯಲ್ಲಿ ಚರ್ಚಿಸಬೇಕೆಂದು ಮೂಲಕ ಸಚಿವರಿಗೆ ಮನವಿಯನ್ನು ಮಾಡುತ್ತೇವೆಂದು ತಿಳಿಸಿದರು.

Related