McDonald : ಕೂಲ್ ಡ್ರಿಂಕ್ಸ್ ನಲ್ಲಿ ಹಲ್ಲಿ ಪತ್ತೆ…!!

  • In Crime
  • May 26, 2022
  • 255 Views
McDonald : ಕೂಲ್ ಡ್ರಿಂಕ್ಸ್ ನಲ್ಲಿ ಹಲ್ಲಿ ಪತ್ತೆ…!!

ಕೂಲ್ ಡ್ರಿಂಕ್ಸ್ನಲ್ಲಿ ಸತ್ತ ಹಲ್ಲಿ ನೋಡಿ ಇಬ್ಬರೂ ಗ್ರಾಹಕರು ಹೌಹಾರಿದ್ದಾರೆ. ಈ ಬಗ್ಗೆ ಮೆಕ್ಡೊನಾಲ್ಡ್ ಮ್ಯಾನೇಜರ್ಗೆ ದೂರು ನೀಡಿದ್ದರೂ ಅವರು ಹೆಚ್ಚು ಗಮನ ಹರಿಸಲಿಲ್ಲ ಅಂತ ಆರೋಪಿಸಿದ್ದಾರೆ.

ಮೆಕ್ ಡೊನಾಲ್ಡ್ಗೆ ಹೋಗಿ ಗ್ರಾಹಕರೊಬ್ಬರು ಕುಡಿಯೋದಕ್ಕೆ ಅಂತ ತಂಪು ಪಾನೀಯ ಕೇಳಿದ್ದಾರೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಅವರಿಗೆ ಕೂಲ್ ಡ್ರಿಂಕ್ಸ್ ತಂದು ಕೊಟ್ಟಿದ್ದಾರೆ. ಇನ್ನೇನು ಕುಡಿಯುಬೇಕು ಅಂತ ಆತ ಗ್ಲಾಸ್ ಬಾಯಿಗಿಟ್ಟಿದ್ದಾನೆ. ಆದರೆ ಅಲ್ಲಿರೋ ವಸ್ತು ಕಂಡು ತಿಂದಿದ್ದ ಆಹಾರವೆಲ್ಲ ಬಾಯಿಗೆ ಬಂದಂತಾಗಿದೆ. ಯಾಕೆಂದ್ರೆ ಆ ಕೂಲ್ ಡ್ರಿಂಕ್ಸ್ನಲ್ಲಿ ಸತ್ತ ಹಲ್ಲಿಯೊಂದು ತೇಲುತ್ತಾ ಇತ್ತು. ಗುಜರಾತ್ನ (Gujarat) ಅಹಮದಾಬಾದ್ನ (Ahmadabad) ಸೈನ್ಸ್ ಸಿಟಿ ರಸ್ತೆಯಲ್ಲಿರುವ ಮೆಕ್ ಡೊನಾಲ್ಡ್ ಔಟ್ ಲೆಟ್ ನಲ್ಲಿ ತಂಪು ಪಾನೀಯದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಇದೀಗ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಈ ಮೆಕ್ ಡೊನಾಲ್ಡ್ ಔಟ್ಲೆಟ್ ಅನ್ನು ಸೀಲ್ ಮಾಡಿದೆ.

ಗುಜರಾತ್ನ ಅಹಮದಾಬಾದ್ನಲ್ಲಿರುವ ಮೆಕ್ ಡೊನಾಲ್ಡ್ನ ತಂಪು ಪಾನೀಯದಲ್ಲಿ ಗ್ರಾಹಕರೊಬ್ಬರು ಹಲ್ಲಿ ತೇಲುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಗ್ರಾಹಕರಲ್ಲಿ ಒಬ್ಬರಾದ ಭಾರ್ಗವ ಜೋಶಿ ಎಂಬುವರು ಇದರ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.

Related