ವಾರ್ನಿಂಗ್ ಎಂಬ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ: ಎಂಬಿ ಪಾಟೀಲ್​

ವಾರ್ನಿಂಗ್ ಎಂಬ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ: ಎಂಬಿ ಪಾಟೀಲ್​

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ತನ್ನ ಗದ್ದುಗೆಯನ್ನು ಏರಿದ್ದು ಸಚಿವ ಶಾಸಕ ಹಾಗೂ ಸಂಸದರ ನಡುವೆ ಸಣ್ಣ ಪುಟ್ಟ ಮಾತುಗಳು ನಡೆಯುತ್ತಿದ್ದು, ನನಗೆ ವಾರ್ನ್ ಮಾಡಿಲ್ಲ, ನಾನು ಯಾರಿಗೂ ವಾರ್ನ್ ಮಾಡಿಲ್ಲ. ವಾರ್ನ್  ಮಾಡಿಸಿಕೊಳ್ಳುವಷ್ಟು ವೀಕ್ ಇಲ್ಲ ಎಂದ ನೂತನ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು 6 ಬಾರಿ ಶಾಸಕನಾಗಿದ್ದೇನೆ, ಗೃಹಸಚಿವನಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆ-ತಾಯಿನೇ ಒಂದೂ ದಿನ ನನಗೆ ವಾರ್ನ್ ಮಾಡಿಲ್ಲ. ವಾರ್ನಿಂಗ್ ಎಂಬ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ. ವಾರ್ನಿಂಗ್ ಕೊಡ್ತೇವೆ ವಿನಃ ನಾವು ತೆಗೆದುಕೊಳ್ಳಲ್ಲ. ಎಂ.ಬಿ.ಪಾಟೀಲ್​ ಯಾರಿಗೂ ಹೆದರಲ್ಲ, ನಾನು ವಿಜಯಪುರದವನು ಎಂದಿದ್ದಾರೆ.

ವಿಧಾನಸೌಧದಲ್ಲಿ ಬಹಳ ಪ್ರೀತಿಯಿಂದ ಎಂ.ಬಿ.ಪಾಟೀಲ್​ರೇ ಅಂತಾ ಸಂಸದ ಡಿ.ಕೆ.ಸುರೇಶ್ ಕರೆದಿದ್ದು ನಿಜ. ಅವರ ಮತ್ತು ನಮ್ಮ ಸಂಬಂಧ ತುಂಬಾ ಚೆನ್ನಾಗಿದೆ. ಕಚೇರಿಯೊಳಗೆ ಬನ್ನಿ ಮಾತಾಡೋಣ ಅಂತಾ ಹೇಳಿ ಹೋದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

ಸಚಿವ ಎಂ.ಬಿ.ಪಾಟೀಲ್​ಗೆ ಡಿಕೆ ಸುರೇಶ್ ಖಡಕ್ ಎಚ್ಚರಿಕೆ

ಐದು ವರ್ಷ ಸಿದ್ದರಾಮಯ್ಯರೇ ಸಿಎಂ, ಡಿಕೆ ಶಿವಕುಮಾರ್​ ಡಿಸಿಎಂ. ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಎನ್ನುವ ಮಾತೇ ಇಲ್ಲ ಎಂದು ಮೈಸೂರಿನ ಸುತ್ತೂರು ಮಠದಲ್ಲಿ ಸಚಿವ ಎಂ.ಬಿ ಪಾಟೀಲ್  ಆಡಿದ ಈ ಮಾತುಗಳು ಕಾಂಗ್ರೆಸ್​ನಲ್ಲಿ ಸಂಚಲನ ಸೃಷ್ಟಿಸಿತ್ತು. ಈ ವಿಚಾರವಾಗಿ ಸಂಸದ ಡಿಕೆ ಸುರೇಶ್ ಅವರು ಎಂಬಿ ಪಾಟೀಲ್​ಗೆ ನೇರವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದರು.

ಎಂ.ಬಿ.ಪಾಟೀಲ್​ಗೆ ಹೇಳಿಕೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ

 

Related