ಸಂಜೆಯೊಳಗೆ ಸಚಿವ ಈಶ್ವರಪ್ಪರನ್ನು ವಜಾ ಮಾಡಲಿ : ಡಿಕೆಶಿ ಆಗ್ರಹ

ಸಂಜೆಯೊಳಗೆ ಸಚಿವ ಈಶ್ವರಪ್ಪರನ್ನು ವಜಾ ಮಾಡಲಿ : ಡಿಕೆಶಿ ಆಗ್ರಹ

ಮಂಗಳೂರು : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಬರೆದಿರುವುದು ಪತ್ರವಲ್ಲ ರಾಜ್ಯದಲ್ಲಿ ಸರ್ಕಾರ ಹೇಗೆ ಆಡಳಿತ ನಡೆಸುತ್ತಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಹಿರಿಯ ಸಚಿವರೊಬ್ಬರು ತಮಗೆ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸರ್ಕಾರದಲ್ಲಿ ಏನು ನಡೆಯುತ್ತಿದೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಮಿನಿಸ್ಟರ್ ಒಬ್ಬರಿಗೆ ಸಿಎಂ ಮೇಲೆ ವಿಶ್ವಾಸ ವಿಲ್ಲ. ಸರ್ಕಾರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ದೂರಿನ ಮೂಲಕ ಈಶ್ವರಪ್ಪ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ತಮ್ಮ ಆಡಳಿತ ಸರಿಯಿದೆ ಎನ್ನುವುದಾದರೆ ಸಂಜೆಯೊಳಗೆ ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡಲಿ. ಇಲ್ಲವೇ ಯಡಿಯೂರಪ್ಪ ಸ್ವಯಂ ಪ್ರೇರಿತರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

Related