ಕೊವಿಡ್‌ಗೆ ಸೆಡ್ಡು: ಮಾಸ್ಕ್ ಧರಿಸಿ ವಿವಾಹ

  • In State
  • March 30, 2020
  • 482 Views
ಕೊವಿಡ್‌ಗೆ ಸೆಡ್ಡು: ಮಾಸ್ಕ್ ಧರಿಸಿ ವಿವಾಹ

ಮಂಡ್ಯ, ಮಾ. 30: ಮನೆಯಂಗಳದಲಿ ಅದೆಷ್ಟೋ ಸರಳ ವಿವಾಹಗಳು ನಡೆದಿರುವುದು ಹೊಸದೇನಲ್ಲ ಆದರೆ ಹಸಿರು ಚಪ್ಪರ ಬಾಳೆ ಕಂದು ವಿವಿದ ಹೂವಿನ ಅಲಂಕಾರ, ಡೋಲು, ನಾದಸ್ವರ ಹೀಗೆ ಶಾಸ್ಟ್ರೋಕ್ತವಾಗಿ ಮದುವೆ ಮಾಡುವುದು ಹಿಂದೂಗಳ ಸಂಪ್ರದಾಯ. ಆದರೆ ಕೊರೋನ ವೈರಸ್ ಹಿನ್ನೆಲೆಯಲ್ಲಿ ಜೋಡಿಯೊಂದು ಮನೆ ಅಂಗಳದಲ್ಲೇ ಸರಳ ವಿವಾಹವಾಗಿರುವ ಅಪರೂಪದ ಘಟನೆಯೊಂದು ಮಂಡ್ಯದ ದೊಡ್ಡಗರಡನಹಳ್ಳಿಯಲ್ಲಿ ನಡೆದಿದೆ.ಮಹಾಮಾರಿ ಕೋವಿಡ್‌ಗೆ ಸೆಡ್ಡು ಹೊಡೆದ ಪೂಜಾ ಮತ್ತು ನಂದೀಶ್ ಎಂಬ ಯುವಕ ಯುವತಿ ಕೇವಲ ಹತ್ತು ಜನರ ಸಮ್ಮುಖದಲ್ಲಿ ಮಾಸ್ಕ್ ಧರಿಸಿ ವಿವಾಹವಾಗುವುದರ ಮೂಲಕ ಸರಳ ವಿವಾಹಕ್ಕೆ ನಾಂದಿ ಹಡುವ ಮೂಲಕ ಎಲ್ಲರ ಮಚ್ಚುಗೆಗೆ ಪಾತ್ರವಾಗಿದ್ದಾರೆ.ಹೌದು, ಕೊರೋನಾ ವೈರೆಸ್ ಇಡೀ ದೇಶಕ್ಕೆ ದೇಶವೇ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಮನೆಯ ಅಂಗಳದಲ್ಲೇ ಸರಳ ವಿಶೇಷ ವಿವಾಹ ನಡೆದಿದೆ. ಮಂಡ್ಯದ ದೊಡ್ಡ ಗರಡನಹಳ್ಳಿಯಲ್ಲಿ ನಡೆದ ವಿವಾಹ ಪೂಜಾ ಮತ್ತು ನಂದೀಶ್ ಎಂಬುವರ ವಿವಾಹ ಕೇವಲ ಹತ್ತು ಜನರು ಭಾಗಿಯಾಗಿದ್ದ ವಿವಾಹ ವಧು ವರರು ಮಾಸ್ಕ್ ಧರಿಸಿದ್ದು ವಿಶೇಷವಾಗಿತ್ತು. ವರ ಮಾಸ್ಕ್ ಧರಿಸಿ ತಾಳಿ ಕಟ್ಟಿದ್ದು ಇನ್ನು ವಿಶೇಷವಾಗಿತ್ತು.  ಮಾಸ್ಕ್ ಹಾಕಿಕೊಂಡೆ ವಧು ವರರಿಗೆ ಶುಭಾಶಯ ಕೋರಿದ ಸ್ನೇಹಿತರು.

Related