ಮಂಡ್ಯದಲ್ಲಿ ಒಂದೇ ದಿನ 62 ಕೊರೋನಾ ಪಾಸಿಟಿವ್ ಪ್ರಕರಣ

ಮಂಡ್ಯದಲ್ಲಿ ಒಂದೇ ದಿನ 62 ಕೊರೋನಾ ಪಾಸಿಟಿವ್ ಪ್ರಕರಣ

ಮಂಡ್ಯ:  ಒಂದೇ ದಿನ 62 ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಜನರನ್ನು ಆತಂಕಕ್ಕೆ ದೂಡಿದೆ.

ಮಂಡ್ಯದಲ್ಲಿ ಒಂದೇ ದಿನ 62 ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಕೆ.ಆರ್ ಪೇಟೆಯಲ್ಲಿ 41, ನಾಗಮಂಗಲದಲ್ಲಿ 21 ಪ್ರಕರಣಗಳು ಕಂಡು ಬಂದಿದೆ. 62ರಲ್ಲಿ 26 ಪುರುಷರು, 23 ಮಹಿಳೆಯರು, 13 ಮಕ್ಕಳು ಇದ್ದಾರೆ. ಇವರೆಲ್ಲರೂ ಮುಂಬೈನಿಂದ ಮಂಡ್ಯದ ಆನಗೊಳ ಚೆಕ್‍ಪೋಸ್ಟ್ ಹಾಗೂ ನಾಗಮಂಗಲದ ಬೆಳ್ಳೂರು ಚೆಕ್‍ಪೋಸ್ಟ್ ಮೂಲಕ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಶಾಸಕ ಜಿ ಎಸ್ ಪುಟ್ಟರಾಜು ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರೂರಾದ ಕೆ.ಆರ್ ಪೇಟೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇದರ ನೇರ ಹೊಣೆ ಸರ್ಕಾರವೇ ಹೊರಬೇಕು. ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದ ಶ್ರೀಗಳು ಮಧ್ಯ ಪ್ರವೇಶಿಸಬೇಕು. ಕೊರೋನಾ ನಿಯಂತ್ರಿಸಲು ನೋಡೆಲ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂದು ಹೇಳಿದರು.

Related