ಜನರು ಸುರಕ್ಷೆತೆಗೆ ಆದ್ಯತೆ ನೀಡಿ

  • In State
  • March 29, 2020
  • 537 Views
ಜನರು ಸುರಕ್ಷೆತೆಗೆ ಆದ್ಯತೆ ನೀಡಿ

ಯಲಬುರ್ಗಾ, ಮಾ. 29: ನಮ್ಮ ವಾರ್ಡಿನಲ್ಲಿರುವ ಪ್ರತಿಯೊಬ್ಬರು ಸಹಿತ ಮನೆಯಿಂದ ಹೊರಗಡೆ ಬಾರದೆ ಮನೆಯಲ್ಲಿಯೇ ಇರಬೇಕು ಅನಾವಶ್ಯಕವಾಗಿ ಹೊರಗಡೆ ಬರಬಾರದು ಇದರಿಂದ ಕೊರೊನಾ ರೋಗವನ್ನು ತಡೆಗಟ್ಟಬಹುದು ಎಂದು ಅಂಗನವಾಡಿ ಕಾರ್ಯಕರ್ತೆ ಶಾರದಾ ಆಲೂರು ಹೇಳಿದರು.

ಪಟ್ಟಣದ 14ನೇ ವಾರ್ಡಿನ ಮೀನಾಕ್ಷಿ ನಗರದಲ್ಲಿ ಮನೆ  ಮನೆಗೆ ತೆರಳಿ ಸಾರ್ವಜನಿಕರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಾ ಅವರು ಮಾತನಾಡಿದರು. ಬೇರೆ ಕಡೆಗೆ ದುಡಿಯಲು ಹೋಗಿ ಮರಳಿ ಇಲ್ಲಿಗೆ ಆಗಮಿಸುವವರು ತಪ್ಪದೆ ಸರಕಾರಿ ಆಸ್ಪತ್ರೆಗೆ ಹೋಗಿ ಪರಿಕ್ಷೆ ಮಾಡಿಸಿಕೊಳ್ಳಬೇಕು ಹಾಗೂ 14 ದಿನಗಳವರೆಗೆ ಕುಟುಂಬಸ್ಥರಿಂದ ಹಾಗೂ ಸಂಬಂಧಿಕರಿಂದ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಯಾವುದಾದರು ಜ್ವರ ಕೆಮ್ಮು ಕಾಣೀಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಬೇಟಿ ನೀಡಬೇಕು.

ಇದರಿಂದ ನಿಮ್ಮ ಕುಟುಂಬ ಹಾಗೂ ನಿಮ್ಮ ಸುತ್ತಮುತ್ತಲಿನ ಜನರನ್ನು ನೀವು ಬದುಕಿಸಿದಂತಾಗುತ್ತದೆ ಹಾಗೂ ಸರಕಾರ ಆದೇಶಿಸಿರುವ ಎಲ್ಲಾ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು  ಇದು ನಮ್ಮ ದೇಶಕ್ಕೆ ನೀವು ನೀಡುವ ದೊಡ್ಡ ಕೊಡುಗೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಹಾಜರಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

 

Related