ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಗಜೇಂದ್ರಗಡ : ಹಿರೇಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷತೆವಹಿಸಿದ್ದ ಪ್ರಧಾನ ಶಿಕ್ಷಕರ ಶ್ರೀ I.A ರೇವಡಿ ಮಾತನಾಡಿ, ವಾಲ್ಮೀಕಿ ಮಹರ್ಷಿ ಒಬ್ಬ ಕವಿ ಮತ್ತು ಋಷಿಯಾಗಿದ್ದರು.

ಹಿಂದೂಗಳ ಶ್ರೇಷ್ಠ ಗ್ರಂಥವಾದ ರಾಮಾಯಣ ರಚಿಸಿದರು. ಅಂತಹ ಶ್ರೇಷ್ಠ ವ್ಯಕ್ತಿಯ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಮಹಾನ್ ವ್ಯಕ್ತಿ ಆಗೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕರು ಎಸ್.ಜಿ ಕುಲಕರ್ಣಿ, ಸಿ.ಎಚ್. ಜೂಚನಿ, ಎಂ.ಎಚ್. ತಟಗಾರ ಉಪಸ್ಥಿತರಿದ್ದರು.

Related