LPG Gas Price Hike: ಜನಸಾಮಾನ್ಯರಿಗೆ ಮತ್ತೊಂದು ಶಾಕ್, ಅಡುಗೆ ಅನಿಲದ ಬೆಲೆ ಏರಿಕೆ

ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ದಿನ ಬಳಕೆಗೆ ಅಗತ್ಯವಾಗಿ ಬೇಕಾದ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ದೇಶೀಯ ಎಲ್ಪಿಜಿ ಸಿಲಿಂಡರ್ಗಳು ಪ್ರತಿ ಕಿಲೋಗ್ರಾಂಗೆ 3.50 ರೂ.ಗಳಷ್ಟು ದುಬಾರಿಯಾಗಿದೆ, ಈಗ ದೇಶದಾದ್ಯಂತ ಬೆಲೆ 1000 ರೂ. ವಾಣಿಜ್ಯ ಸಿಲಿಂಡರ್ ಬೆಲೆ ಪ್ರತಿ ಕಿಲೋಗ್ರಾಂಗೆ 8 ರೂಪಾಯಿಗಳಷ್ಟು ಏರಿಕೆಯಾಗಿದೆ.


ನವದೆಹಲಿ: ಜನಸಾಮಾನ್ಯರಿಗೆ ಬರೆ ಮೇಲೆ ಬರೆ ಬೀಳುತ್ತಾ ಇದೆ. ಬೆಲೆ ಏರಿಕೆ ಬಿಸಿಗೆ ಸುಟ್ಟು ಸಂಕಷ್ಟಪಡುವಂತೆ ಆಗಿದೆ. ಯಾಕೆಂದ್ರೆ ಒಂದೆಡೆ ಅಕಾಲಿಕ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ. ಇದರ ಜೊತೆ ತರಕಾರಿ ಸೇರಿದಂತೆ ಅಗತ್ಯ ಆಹಾರ ಸಾಮಗ್ರಿಗಳ ಬೆಲೆ ಏರುತ್ತಿದೆ. ಇವೆಲ್ಲ ಸಾಲದು ಅಂತ ಇದೀಗ ದಿನ ಬಳಕೆಗೆ ಅಗತ್ಯವಾಗಿ ಬೇಕಾದ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ. ದೇಶೀಯ ಎಲ್ಪಿಜಿ ಸಿಲಿಂಡರ್ಗಳು ಪ್ರತಿ ಕಿಲೋಗ್ರಾಂಗೆ 3.50 ರೂ.ಗಳಷ್ಟು ದುಬಾರಿಯಾಗಿದೆ, ಈಗ ದೇಶದಾದ್ಯಂತ ಬೆಲೆ 1000 ರೂ. ವಾಣಿಜ್ಯ ಸಿಲಿಂಡರ್ ಬೆಲೆ ಪ್ರತಿ ಕಿಲೋಗ್ರಾಂಗೆ 8 ರೂಪಾಯಿಗಳಷ್ಟು ಏರಿಕೆಯಾಗಿದೆ.


ಜನಸಾಮಾನ್ಯರಿಗೆ ಅಗತ್ಯವಾಗಿ ಬೇಕಾದ ದಿನಬಳಕೆಯ ಅಡುಗೆ ಅನಿಲ ಬೆಲೆ ಮತ್ತೆ ಏರಿಕೆಯಾಗಿದೆ. 14.2 ಕೆಜಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 3.5 ರೂಪಾಯಿ ಏರಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಈ ಮೂಲಕ ಇಂದಿನಿಂದ ಗೃಹಬಳಕೆಯ ಸಿಲಿಂಡರ್ ಬೆಲೆ 1003 ರೂಪಾಯಿ ಆಗಿದೆ. ಈ ಮೊದಲು 999.50 ರೂಪಾಯಿಗಳಿದ್ದವು.

Related