ಲಾಕ್​ಡೌನ್ ತೆರವಿಗೆ ಮನವಿ  

ಲಾಕ್​ಡೌನ್ ತೆರವಿಗೆ ಮನವಿ  

ಬೆಂಗಳೂರು: ಚಾಮರಾಜಪೇಟೆಯ ಶಂಕರಮಠದಲ್ಲಿ  ಧನ್ವಂತರಿ ಯಾಗದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಲಾಕ್​ಡೌನ್ ಅಗತ್ಯವೇನು ಇಲ್ಲ ಎಂದು ಅಭಿಪ್ರಾಯಪಟ್ಟರು. ಆರ್ಥಿಕ ಸುಧಾರಣೆಯಾಗುವ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದ್ದರಿಂದ ಲಾಕ್​ಡೌನ್ ಸಂಪೂರ್ಣ ತೆರವು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಅವರಿಗೆ ಮನವರಿಕೆ ಮಾಡಲಾಗುತ್ತದೆ ಎಂದರು.

ರಾಜ್ಯದಲ್ಲಿ ಹಣಕಾಸು ಪರಿಸ್ಥಿತಿ ಸರಿ ಇಲ್ಲದಿದ್ದರೂ ರೈತ ನೆಮ್ಮದಿಯಿಂದ ಇರಬೇಕೆಂಬ ಕಾರಣಕ್ಕೆ ಪ್ರಧಾನಿ ಸಮ್ಮಾನ್ ನಿಧಿಗೆ ಎರಡನೇ ಕಂತು ಹಣ ಬಿಡುಗಡೆ ಮಾಡಲಾಗಿದೆ. 50 ಲಕ್ಷ ರೈತರಿಗೆ ತಲಾ ಒಂದು ಸಾವಿರ ರೂ. ಸಿಗುವಂತಾಗಲಿ ಎಂಬ ಕಾರಣಕ್ಕೆ 1000 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಮುಂಗಾರು  ರೈತರಿಗೆ ಹಣದ ಅಗತ್ಯತೆ ಇರುತ್ತದೆ ಎಂದು ಹೇಳಿದರು. ಜನಜೀವನ ಇನ್ನಷ್ಟು ಸುಗಮವಾಗಲು ಲಾಕ್​ಡೌನ್ ಸಂಪೂರ್ಣ ತೆರವು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

 

Related