ಧೋನಿ ಪತ್ತೆಯಿಲ್ವಂತೆ!

ಧೋನಿ ಪತ್ತೆಯಿಲ್ವಂತೆ!

ನವದೆಹಲಿ, ಫೆ. 07 : ಜನವರಿ ಮುಗಿದು ಫೆಬ್ರವರಿ ಬಂದಿದೆ. ಎಂ ಎಸ್ ಧೋನಿ ಭವಿಷ್ಯದ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಅಭಿಮಾನಿಗಳಲ್ಲೂ ಹೆಚ್ಚಿನ ಗೊಂದಲಕ್ಕೆ ಕಾರಣ. 2019 ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ರಂಗದಿಂದ ದೂರವುಳಿದಿರುವ ಧೋನಿ ಪುನರಾಗಮನ ಮಾಡುತ್ತಾರೆಯೋ ಅಥವಾ ನಿವೃತ್ತಿ ಸಲ್ಲಿಸಲಿದ್ದಾರೆಯೇ ಎಂಬುದು ಸಾಕಷ್ಟು ವದಂತಿಗಳಿಗೆ ಕಾರಣ. ಆಯ್ಕೆ ಸಮಿತಿ ಕೂಡಾ ಧೋನಿ ಭವಿಷ್ಯದ ಬಗ್ಗೆ ಸ್ಪಷ್ಟತೆಯಿದೆ ಎಂದಷ್ಟೇ ಹೇಳುತ್ತಿದೆ. ನಿವೃತ್ತಿ ವಿಚಾರ ಧೋನಿ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಕೈ ತೊಳೆದುಕೊಂಡಿದೆ. ಧೋನಿ ಕ್ರಿಕೆಟ್ ರಂಗದಿಂದ ದೂರವುಳಿದು 210 ದಿನಗಳೇ ಸಂದಿದೆ. ಕುಟುಂಬದ ಜತೆ ಸಾಕಷ್ಟು ಸಮಯ ಕಳೆದಿದ್ದಾರೆ. ಈ ಮಧ್ಯೆ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ಹೊಂದಿರುವ ಧೋನಿ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು.

Related