ಶತಕೋಟಿ ದಾಟಿದ ಲಸಿಕಾಕರಣದ ಸಾಧನೆಗೆ ಹೆಮ್ಮೆ ಪಡೋಣ

ಶತಕೋಟಿ ದಾಟಿದ ಲಸಿಕಾಕರಣದ ಸಾಧನೆಗೆ ಹೆಮ್ಮೆ ಪಡೋಣ

ಶಹಾಪುರ : ಕೊವೀಡ್ ಲಸಿಕಾ ಅಭಿಯಾನ ಆರಂಭಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಭಾರತ ಈಗ 100 ಕೋಟಿ ಡೋಸ್‌ಗಳ ಮೈಲುಗಲ್ಲಿನೊಂದಿಗೆ ಇತಿಹಾಸ ಸೃಷ್ಠಿಸಿದೆ ಎಂದು ಮಾಜಿ ಶಾಸಕ ಗುರುಪಾಟೀಲ್ ಶಿರವಾಳ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿಜೆಪಿ ವತಿಯಿಂದ ಕೊರೋನಾ ವಾರಿಯರ್ಸ್ಗಳು, ವೈದ್ಯರಿಗೆ ಸಿಬ್ಬಂದಿಗೆ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಮಾತನಾಡಿ, ಕೋವಿಡ್ ವಿರುದ್ಧ ಸುರಕ್ಷಾ ಕವಚವಾಗಿರುವ ಕೋವಿಡ್ ವ್ಯಾಕ್ಸಿನೇಷನ್ 100 ಕೋಟಿ ಸಾಧನೆ ಮಾಡಲಾಗಿದೆ.
ಜಗತ್ತೆ ತಲ್ಲಣಗೊಳ್ಳುವಂತೆ ಮಾಡಿದ ಕೊರೋನಾ ವಿರುದ್ಧ ದೇಶ ಆರಂಭದಿAದಲೇ ಸಂಘರ್ಷ ನಡೆದು, ಆರೋಗ್ಯ ಜೀವನ ಭದ್ರತೆಗೆ ಕೇಂದ್ರ ಸರ್ಕಾರ ವ್ಯಾಪಕ ಕೈಗೊಂಡಿದ್ದ ಫಲ ಕೋವಿಡ್ ಲಸಿಕೆ ನೀಡಿರುವುದರಿಂದ ಹತೋಟಿಗೆ ತರಲಾಗಿದೆ. ಈ ಸಾಧನೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಜನರ ಆರೋಗ್ಯ ಸುರಕ್ಷೆಗೆ ಲಸಿಕೆ ಆವಿಷ್ಕಾರದಿಂದ ಲಸಿಕೆ ಹಾಕುವುದರವರೆಗೂ ಪ್ರಧಾನಿ ಮೋದಿ ಅವರ ಕಾಳಜಿ ಈ ಯಶಸ್ವಿಗೆ ಕಾರಣವಾಗಿದ್ದು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಯುವ ಮುಖಂಡ ಅಮೀನರೆಡ್ಡಿ ಯಾಳಗಿ ಮಾತನಾಡಿ, ಕೊರೋನಾ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎಲ್ಲ ರೀತಿಯಿಂದಲೂ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ವೈರಸ್ ಇಳಿಮುಖವಾಗುತ್ತಿದೆ. ಪ್ರಧಾನಿ ಮೋದಿ ಅವರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಸಾಧನೆಯೊಂದಿಗೆ ಚೀನಾ ಬಳಿಕ ಶತಕೋಟಿ ಲಸಿಕೆ ಕ್ಲಬ್‌ಗೆ ಸೇರಿದ ವಿಶ್ವದ ಎರಡನೇ ದೇಶವಾಗಿ ಭಾರತ ಹೊರಹೊಮ್ಮಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಚಂದ್ರಶೇಖರ ಸುಬೇದಾರ, ನಗರ ಮಂಡಲ ಅಧ್ಯಕ್ಷ ದೇವಿಂದ್ರ ಕೊನೇರ, ಮಲ್ಲಿಕಾರ್ಜುನ ಕಂದಕೂರ, ಬಸವರಾಜಪ್ಪಗೌಡ ವಿಭೂತಿಹಳ್ಳಿ, ಪ್ರಶಾಂತ ಸಜ್ಜನ್, ವಿರೇಶ ಅಡಕಿ, ಸಿದ್ದಯ್ಯಸ್ವಾಮಿ ಹಿರೇಮಠ, ಅಪ್ಸರ್ ಜಮಖಂಡಿ, ಸೋಪಣ್ಣ ಸಗರ, ಹಣಮಂತ ಕದ್ರಾಪುರ, ವೆಂಕಟೇಶ ಮಕಾಶಿ, ಚಂದ್ರು ಯಾಳಗಿ, ನಗರಸಭೆ ಸದಸ್ಯ ಅಪ್ಪಣ್ಣ ದಶವಂತ, ರಾಘವೇಂದ್ರ ಯಕ್ಷಿಂತಿ, ಅಂಬ್ರೇಶ ನಂದಿಕೊಲ, ಯಲ್ಲಾಲಿಂಗ ಯಕ್ಷಿಂತಿ, ವಿಶ್ವನಾಥ ಗೌಡಗಾಂವ, ಸಂಗಣ್ಣ, ಮಂಜು ಅಪ್ಲೆ, ಗಂಗಣ್ಣ ಅವಂಟಿ, ರಾಘವೇಂದ್ರ ಹೊಸ್ಮನಿ, ಶಿವರಾಜ ಜಂಗಳಿ, ಶಕೀಲ ಮುಲ್ಲಾ, ವೆಂಕಟೇಶ ಗೌನಳ್ಳಿ, ಭಾರತಿ ಜಮಖಂಡಿ, ಲಕ್ಷಿö್ಮÃ ಚಂದಾಫುರ, ಸುವರ್ಣ ವಿ ದಾಸ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇನ್ನಿತರರಿದ್ದರು.

Related