ಟ್ರೋಲಿಗರ ವಿರುದ್ಧ ಲಿಯಾ ರಗಂ..!

  • In Cinema
  • July 28, 2022
  • 34 Views
ಟ್ರೋಲಿಗರ ವಿರುದ್ಧ ಲಿಯಾ ರಗಂ..!

RRR ನಾಯಕಿ ಆಲಿಯಾ ಭಟ್ ತಾನು ಗರ್ಭಿಣಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.ಇದಕ್ಕೆ ಸಂಬಂಧಿಸಿದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಂತರ ಅವರ ಬಗ್ಗೆ ಹಲವಾರು ಸುದ್ದಿಗಳು ಹರಿದಾಡಿದೆ. ಸದ್ಯ ಅವರು ತಮ್ಮ ಜೀವನದ ಬಗ್ಗೆ ಮಾತನಾಡಿದ್ದು, ಎಲ್ಲೆಡೆ ವೈರಲ್​ ಆಗುತ್ತಿದೆ.

ಇದೀಗ ಆಲಿಯಾ ಹಾಗೂ ರಣಬೀರ್ ಪೋಷಕರಾಗುತ್ತಿರುವ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಹಾಗೆಯೇ ಅಭಿಮಾನಿಗಳು ಈ ಜೋಡಿಗೆ ವಿಶ್ ಮಾಡಿದ್ದರು.

ತಾವೂ ಗರ್ಭಿಣಿ ಎಂಬ ವಿಚಾರ ಹೇಳಿದ ನಂತರ ಸಹ ಅವರು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡರೆ ಇನ್ನೂ ಕೆಲವರು ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ.

ಆಲಿಯಾ ಇತ್ತೀಚೆಗೆ ತಮ್ಮ ಡಾರ್ಲಿಂಗ್ಸ್​ ಸಿನಿಮಾದ ಪ್ರಮೋಷನಲ್​ನಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಕೆಲವರು ಆಲಿಯಾ ನಿಜಕ್ಕೂ ಗರ್ಭಿಣಿಯಾ ಎಂದೆಲ್ಲಾ ಪ್ರಶ್ನೆ ಮಾಡಿದ್ದರು.

ಅಲ್ಲದೇ, ಕೆಲವರಂತೂ ಆಲಿಯಾ ಪ್ರಚಾರ ಪಡೆಯಲೆಂದೇ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಇದನೆಲ್ಲಾ ಗಮನಿಸಿರುವ ಆಲಿಯಾ ಫುಲ್ ಗರಂ ಆಗಿದ್ದಾರೆ. ವೃತ್ತಿ ಮತ್ತು ವೈಯಕ್ತಿಕ ಜೀವನ ಬೇರೆ ಬೇರೆ. ಒಂದಕ್ಕೊಂದನ್ನು ಯಾವುದೇ ಕಾರಣಕ್ಕೂ ಹೋಲಿಸಬೇಡಿ. ನಾನು ಎರಡನ್ನೂ ಪ್ರೀತಿಸುವವಳು ಎಂದು ಹೇಳಿದ್ದಾರೆ. ಅಲ್ಲದೇ, ಮತ್ತಷ್ಟು ದಿನ ಚಿತ್ರೀಕರಣದಲ್ಲಿ ಭಾಗಿ ಆಗುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡಲು ಯಾರಿಗೂ ಹಕ್ಕಿಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Related