ಕುಮಾರಸ್ವಾಮಿ ಒಬ್ಬ ನೈಜ ಬ್ಲಾಕ್ಮೇಲ್ ರಾಜಕಾರಣಿ

ಕುಮಾರಸ್ವಾಮಿ ಒಬ್ಬ ನೈಜ ಬ್ಲಾಕ್ಮೇಲ್ ರಾಜಕಾರಣಿ

ಬೆಂಗಳೂರು: ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಅನಾವಶ್ಯಕವಾಗಿ ಕಾಂಗ್ರೆಸ್ ಪಕ್ಷದ ಹಾಗೂ ಸರ್ಕಾರದ ಮೇಲೆ ಐಟಿ ದಾಳಿ ನೆಪೋಡ್ಡಿ ಭ್ರಷ್ಟಾಚಾರದ ಆರೋಪವನ್ನು ಮಾಡುತ್ತಿರುವ  ಹಿನ್ನೆಲೆಯಲ್ಲಿ ಅವರ ವಿರುದ್ಧ ವಿನೂತನ ಪ್ರತಿಭಟನೆಯನ್ನು ಇಂದು ಗಾಂಧಿ ಪ್ರತಿಮೆ ರೇಸ್ ಕೋರ್ಸ್ ರಸ್ತೆ ಬಳಿ  ನಡೆಸಿದರು.

ಭಾರತೀಯ ಜನತಾ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಈ ಹಿಂದೆ ಬಿಜೆಪಿ ಸರ್ಕಾರದ ಮಂತ್ರಿಗಳಿಗೆ ಬ್ಲಾಕ್ ಮೈಲ್ ಮಾಡಿ ಒಳ ಒಪ್ಪಂದ ಮಾಡಿಕೊಂಡು ಲಾಭ ಪಡೆದಿರುವುದು ಎಲ್ಲರಿಗೂ ತಿಳಿದಿದೆ.

ಈಗ ಬಿಜೆಪಿಯೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮಂತ್ರಿಗಳ ವಿರುದ್ಧ ಬ್ಲಾಕ್ ಮೈಲ್ ತಂತ್ರವನ್ನು ಮಾಡುತ್ತಿದ್ದಾರೆ, ಕುಮಾರಸ್ವಾಮಿ ಒಬ್ಬ ನೈಜ ಬ್ಲಾಕ್ಮೇಲ್ ರಾಜಕಾರಣಿ ಎಂದು ರಾಜ್ಯದ ಜನತೆಗೆ ಈಗಾಗಲೇ ಬಹಿರಂಗವಾಗಿದೆ.

ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ನಡೆಸಿದ ಬಿಜೆಪಿಯವರು ಇಂದು ಅದನ್ನು ಮರೆಮಾಚಲು ಹಾಗೂ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಕುಗ್ಗಿಸಲು ಜೆಡಿಎಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ, ಆದರ ರಹಿತವಾದ ಆರೋಪವನ್ನು ಮಾಡುತ್ತಿದ್ದಾರೆ.

ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಎಷ್ಟು ಮೂರ್ಖರು ಎಂದು ಈಗ ಜನತೆಗೆ ತಿಳಿದಿದೆ, ಕೇಂದ್ರ ಸರ್ಕಾರದ ಆಧೀನದಲ್ಲಿರುವ ಆದಾಯ ತೆರಿಗೆ, ಇಡೀ, ಸಿಬಿಐ, ಇಲಾಖೆಗಳು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ಜನತೆಗೆ ತಿಳಿದಿದೆ.

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪತ್ತೆಹಚ್ಚಿದ ಹಣ ಯಾವ ಮೂಲದ್ದು ಎಂದು ಅಧಿಕಾರಿಗಳೇ ಪತ್ರಿಕಾ ಹೇಳಿಕೆ ಮೂಲಕ ಬಹಿರಂಗಪಡಿಸಿದ್ದಾರೆ.

ಇಷ್ಟಾದರೂ ಸಾಮಾನ್ಯ ಪ್ರಜ್ಞೆ ಇಲ್ಲದ ಬಿಜೆಪಿ, ಜೆಡಿಎಸ್ ನವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೂಟಿ ಮಾಡಿರುವ ಹಣದಲ್ಲಿ ಬಿಜೆಪಿ, ಜೆಡಿಎಸ್ ಇಂದು ಹೋರಾಟ ನಡೆಸುತ್ತಿದೆ. ಯಾರ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದರು ಬಿಜೆಪಿ ಯಾರ ವಿರುದ್ಧ ಹೋರಾಟ ನಡೆಸಿತು ಅದನ್ನೆಲ್ಲ ಮರೆತು ಭ್ರಷ್ಟಾಚಾರದ ಮೂಲಕ ಇಂದು ಒಂದಾಗಿದ್ದಾರೆ.

ರಾಜ್ಯದ ಜನತೆಗೆ ಭ್ರಷ್ಟ ಬಿಜೆಪಿ ಹಾಗೂ ಜನತಾದಳದ ರಾಜಕೀಯ ಲಾಭದ ಹೋರಾಟವನ್ನು ತಿಳಿಸಲು ಈ ವಿನೂತನ ಪ್ರತಿಭಟನೆಯನ್ನು ಇಂದು ನಡೆಸಲಾಯಿತು.

ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ, ಎಸ್.ಮನೋಹರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಹಾಗೂ ಕಾಂಗ್ರೆಸ್ ಮುಖಂಡರುಗಳಾದ ಜಿ.ಜನಾರ್ಧನ್, ಸುಧಾಕರ್, ಪರಿಸರ ರಾಮಕೃಷ್ಣ, ಈ. ಶೇಖರ್, ಪ್ರಕಾಶ್, ಹೇಮರಾಜ್, ಶ್ರೀಧರ್, ಆನಂದ್, ಕೆ.ಟಿ. ನವೀನ್, ಚಿನ್ನಿಪ್ರಕಾಶ್, ಓಬಳೇಶ್, ಹಾಗೂ ಉಮೇಶ್, ಪುಟ್ಟರಾಜು, ಹಾಗೂ ಕಾಂಗ್ರೆಸ್ ಕಾರ್ಯಕರ್ತರುಗಳು ಭಾಗವಹಿಸಿದ್ದರು.

Related