ಕಳಪೆ ರಸ್ತೆ; ಪ್ರಯಾಣಿಕರ ಗೋಳಾಟ

ಕಳಪೆ ರಸ್ತೆ; ಪ್ರಯಾಣಿಕರ ಗೋಳಾಟ

ಕುಕನೂರ: ಸತತ ಹೋರಾಟದ ಪರಿಣಾಮ ರಸ್ತೆ ಡಾಂಬರೀಕರಣವೇನೋ ಮುಗಿಯಿತು, ಆದರೆ ಕಳಪೆ ಗುಣಮಟ್ಟದ ರಸ್ತೆಗಳು ಅಂಗೈ ಹುಣ್ಣಿಗೆ ಹಿಡಿದ ಕೈಗನ್ನಡಿ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಂದಪ್ಪ ಕೋಳೂರ ಆರೋಪಿಸಿದ್ದಾರೆ.

ಈ ವೇಳೆ ಮಾತನಾಡಿದ ಅಂದಪ್ಪ ಕೋಳೂರವರು ತಾಲೂಕಿನ ಕೊನೆಯ ಭಾಗವಾದ ಯರೇಹಂಚಿನಾಳ ಗ್ರಾಮದಿಂದ ನರೇಗಲ್ಲ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆಯ ಡಾಂಬರೀಕರಣ ಕಾಮಗಾರಿ ಪ್ರಾರಂಭವಾಗಿದ್ದು ಲಾಕ್‍ಡೌನ್ ಸಂದರ್ಭದಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ನಮ್ಮ ಗ್ರಾಮದಿಂದ ಹೋಗುವ ಈ ರಸ್ತೆ ನರೇಗಲ್ಲ ರೋಣ ಸೇರಿದಂತೆ ಅನೇಕ ಪಟ್ಟಣಗಳಿಗೆ ತಲುಪಲು ಅತ್ಯಂತ ಅನೂಕುಲಕರವಾಗಿದೆ. ನಮ್ಮ ಸಂಘಟನೆಯಿಂದ ಹಲವಾರು ವರ್ಷ ಸತತ ಹೋರಾಟ ನಡೆಸಿ ಶಾಸಕರು ಮತ್ತು ಸಂಸದರು ಹಾಗೂ ಅಧಿಕಾರಿಗಳ ಮೇಲೆ ನಿರಂತರ ಒತ್ತಡ ತಂದು ಸಾಕಷ್ಟು ಭಾರಿ ಮನವಿ ಸಲ್ಲಿಸಿದ ನಂತರ ನಮ್ಮ ಹೋರಾಟಕ್ಕೆ ಫಲ ಸಿಕ್ಕಿತ್ತು.

ಇತ್ತೀಚಿಗೆ ನಮ್ಮ ತಾಲೂಕಿನ ಶಾಸಕರು ಕಾಳಜಿವಹಿಸಿ ಡಾಂಬರೀಕರಣಕ್ಕೆ ಹಣ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದರು. ಆ ವೇಳೆ ಶಾಸಕರು ಕಾಮಗಾರಿ ಅತ್ಯಂತ ಗುಣಮಟ್ಟದಿಂದ ರಸ್ತೆಗಳು ಕೂಡಿರಬೇಕು. ಕಳಪೆ ಕಾಮಗಾರಿಯನ್ನು ಮಾಡಬಾರದು. ಒಂದು ವೇಳೆ ಕಾಮಗಾರಿ ಕಳಪೆಯಾಗಿದ್ದು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದರು.

ಇತ್ತೀಚಿಗೆ ನಿರ್ಮಾಣವಾದ ರಸ್ತೆ ಅತ್ಯಂತ ಕಳಪೆ ಮಟ್ಟದಿಂದ ಕೂಡಿದ್ದು ಹೊಸ ಡಾಂಬರ್ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿರುಕು ಬಿಟ್ಟಿದ್ದು ಜನ ನಡೆದಾಡಲು ಸಾಧ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಗಮನಹರಿಸಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ನಿರ್ಮಿಸಿ ಕೊಡಬೇಕು. ಇಲ್ಲವಾದಲ್ಲಿ ರೈತ ಸಂಘದಿಂದ ಉಗ್ರ ಹೋರಾಟ ಹಮ್ಮಿಕೊಳಲಾಗುವುದು ಎಂದು ಹೇಳಿದರು.

Related