ಕೊಪ್ಪಳ: ಲಾಕ್ ಡೌನ್ ಉತ್ತಮ ಪ್ರತಿಕ್ರಿಯೆ

  • In State
  • July 12, 2020
  • 383 Views
ಕೊಪ್ಪಳ: ಲಾಕ್ ಡೌನ್ ಉತ್ತಮ ಪ್ರತಿಕ್ರಿಯೆ

ಕೊಪ್ಪಳ : ಸಂಡೆ ಲಾಕ್ ಡೌನ್ ಗೆ ಕೊಪ್ಪಳ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾರದಲ್ಲಿ ಪಾಜಿಟಿವ್ ಪ್ರಕರಣಗಳು, ಸಾವುಗಳ ಸಂಖ್ಯೆ ಹೆಚ್ಚಾಗಿದೆ. ಜನ ಸ್ವಯಂಪ್ರೇರಿತ ರಾಗಿ ಲಾಕಡೌನ್ ಗೆ ಮುಂದಾಗಿದ್ದಾರೆ. ಜನತೆ ಸ್ವಯಂಪ್ರೇರಿತ ರಾಗಿ ಪ್ರತಿದಿನ ಮದ್ಯಾಹ್ನ 2 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಲಾಕ್ ಡೌನ್ ಮಾಡುತ್ತಿದ್ದಾರೆ.
6 ಜನರು ಮೃತಪಟ್ಟಿದ್ದು 210 ಪ್ರಕರಣಗಳು ದಾಖಲಾಗಿವೆ.ಇ ನ್ನೂ 2 ಸಾವಿರಕ್ಕೂ ಹೆಚ್ಚು ರಿಜಲ್ಟ್ ಬರಬೇಕಿದೆ.
ಮೆಡಿಕಲ್, ಹಾಲು ಮಾರಾಟ ಕೇಂದ್ರ ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಬಂದಾಗಿವೆ. ಸಂಚಾರ ನಿಲ್ಲಿಸಿರುವ ಕೆಎಸ್ ಆರ್ ಟಿಸಿ, ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ.

Related