ಗುಲಾಬಿ ಹೂವಿನ ಉಪಯೋಗ ತಿಳಿಯಿರಿ

ಗುಲಾಬಿ ಹೂವಿನ ಉಪಯೋಗ ತಿಳಿಯಿರಿ

ನಮಗೆ ಗೊತ್ತಿರುವ ಹಾಗೆ ಹೂಗಳಲ್ಲಿ ಅತಿ ಸುಂದರವಾಗಿರುವ ಹೂ ಎಂದರೆ ಅದು ಗುಲಾಬಿ ಹೂ. ಈ ಗುಲಾಬಿ ಹೂವನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ.

ಗುಲಾಬಿ ಹೂವು ಕೇವಲ ನೋಡಲು ಮತ್ತು ಮುಡಿಯಲು ಮಾತ್ರವಲ್ಲದೆ ಈ ಗುಲಾಬಿ ಹೂವಿನಲ್ಲಿ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳಿವೆ ಎಂದು ವೈದ್ಯರು ತಿಳಿಸುತ್ತಾರೆ.

ಗುಲಾಬಿ ಹೂ ಎಷ್ಟು ಮೃದುವಾಗಿದೆಯೋ, ಇದರ ಬಳಕೆಯಿಂದ ಅಷ್ಟೇ ಮೃಧುತ್ವ ಚರ್ಮಕ್ಕೆ ಬರುತ್ತದೆ. ಬೇಸಿಗೆ ಬಂದಾಕ್ಷಣ ಮನುಷ್ಯನಿಗೆ ಆಯಾಸ, ಬಳಲಿಕೆ, ಶರೀರದಲ್ಲಿ ಉಷ್ಣಾಂಶ ಹೆಚ್ಚುವಿಕೆ ಎಲ್ಲವೂ ಪ್ರಾರಂಭವಾಗುತ್ತದೆ.

ಪಿತ್ತ ಪ್ರಕೋಪದಿಂದ ಪಿತ್ತವಾಂತಿ, ಪಿತ್ತಾತಿಸಾರ, ತಲೆಸುತ್ತು ಎಲ್ಲ ಸರ್ವೇಸಾಮಾನ್ಯ ಬೆವರಿನ ದಿನದ ಸಮಸ್ಯೆಗಳು. ಈ ಎಲ್ಲಾ ಸಮಸ್ಯೆಗಳಿಗೆ ಗುಲಾಬಿ ಹೂವಿನಿಂದ ಚಿಕಿತ್ಸೆಯನ್ನು ಮಾಡಬಹುದು.

ರೋಸ್ ವಾಟರ್‌ನಿಂದ ಬಹಳ ಉಪಯೋಗಗಳಿವೆ. ಹತ್ತಿಯಲ್ಲಿ ರೋಸ್ ವಾಟರ್‌ಅನ್ನು ನೆನೆಸಿ ಕಣ್ಣುಗಳ ಮೇಲೆ 10-15 ನಿಮಿಷ ಇಟ್ಟುಕೊಳ್ಳುವುದರಿಂದ ಕಣ್ಣುರಿ ಕಡಿಮೆಯಾಗುತ್ತದೆ.

ಗುಲಾಬಿ ಎಸಳುಗಳನ್ನು ಬಿಡಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ಬೇಕಾದಾಗ ನೀರಿಗೆ ಹಾಕಿ ಸ್ವಲ್ಪ ಸಕ್ಕರೆ ಹಾಕಿ ಕುಡಿಯುವುದರಿಂದ ಬಾಯಿಹುಣ್ಣು ನಿವಾರಣೆಯಾಗುತ್ತದೆ.

ಗುಲಾಬಿಯಿಂದ ತೆಗೆಯುವ ತೈಲ ಬಳಕೆಯಿಂದ ಅತ್ಯಂತ ಸಿಟ್ಟು, ಭಯ ನಿವಾರಣೆ ಹಾಗೂ ಮಾನಸಿಕ ದೌರ್ಬಲ್ಯಗಳಿಗೆ ಉಪಯೋಗವಾಗುತ್ತದೆ.

ಗುಲಾಬಿ ಹೂವಿನ ದಳಗಳನ್ನು ತಿನ್ನುತ್ತಾ ಹೋದರೆ ಮುಖದ ಮೇಲಿನ ಕಲೆಗಳು ದೂರವಾಗುತ್ತವೆ. ದಿನಂಪ್ರತಿ ಸೇವಿಸಿದರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತಾ ಹೋಗುತ್ತೆ. ಅದಕ್ಕೆ ಸಾಧ್ಯವಾದ್ರೆ ದಿನ ಗುಲಾಬಿ ದಳಗಳನ್ನು ತಿನ್ನಿರಿ.

ಗುಲಾಬಿ ದಳಗಳಲ್ಲಿ ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತಮ ಪಡಿಸುವ ಜೊತೆಗೆ ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುತ್ತದೆ. ಅದರಿಂದ ನಿಮ್ಮ ದೇಹದ ತೂಕ ನಿಯಂತ್ರಣದಲ್ಲಿ ಮಾಡಲು ಗುಲಾಬಿ ಹೂವು ಸಹಾಯ ಮಾಡುತ್ತೆ.

ದಿನವೂ ಗುಲಾಬಿ ದಳಗಳನ್ನು ತಿನ್ನುತ್ತಾ ಹೋದರೆ, ಹೃದಯ ಸಮಸ್ಯೆ ನಿಯಂತ್ರಣ ಮಾಡುವುದರ ಜೊತೆಗೆ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

Related