ಕಿಚ್ಚ ಸುದೀಪ್ ಮತ ಚಲಾಯಿಸಿ ಸಂಭ್ರಮ!

ಕಿಚ್ಚ ಸುದೀಪ್ ಮತ ಚಲಾಯಿಸಿ ಸಂಭ್ರಮ!

ಬೆಂಗಳೂರು: ಇಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ದಿನವಾಗಿದ್ದು ಸಿನಿ ಸ್ಟಾರ್ ಗಳು ತಮ್ಮ ಮತದಾನ ಚಲಾಯಿಸುವ ಮುಖಾಂತರ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇನ್ನು ನಟ ಕಿಚ್ಚ ಸುದೀಪ್ ಅವರು ತನ್ನ ಮಗಳು ಫಸ್ಟ್ ಟೈಮ್ ಮತದಾನ ಮಾಡಿರುವ ಸಂಭ್ರಮವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡಿದಾಗಿನಿಂದ ಸುದ್ದಿಯಲ್ಲಿದ್ದಾರೆ. ಅದರಲ್ಲೂ ‘ಬೊಮ್ಮಾಯಿ ಮಾಮ’ ಪರವಾಗಿ ಪ್ರಚಾರ ಮಾಡಿದಾಗಿನಿಂದ ಹಿಡಿದು ಅವರ ಈ ನಡೆಯ ಬಗ್ಗೆ ಪರ ವಿರೋಧಗಳು ಕೇಳಿ ಬರುತ್ತಿದ್ದವು. ಇಂದು ರಾಜ್ಯದ ಭವಿಷ್ಯ ನಿರ್ಧಾರ ಆಗುವ ದಿನ ಆಗಿದ್ದು ಕಿಚ್ಚ ಸುದೀಪ್ ಪುಟ್ಟೇನಹಳ್ಳಿ ಆಕ್ಸ್‌ಫರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭ ಅವರು ತಮ್ಮ ಮಗಳ ಪ್ರಥಮ ಮತದಾನದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸಂದರ್ಭ ಮಾತನಾಡಿದ ಕಿಚ್ಚ “ನನ್ ಮಗಳು ಫಸ್ಟ್ ಟೈಮ್ ವೋಟ್ ಮಾಡ್ತಿದಾಳೆ. ರೋಡ್ ತುಂಬಾ ವೀಡಿಯೋ ಮಾಡ್ತಾ ಬಂದೆ. ನನ್ನ ಮಗಳು ಏನೆ ಮಾಡಿದ್ರು ಅದನ್ನ ವೀಡಿಯೋ ಮಾಡಿ ಸೆಲೆಬ್ರೇಟ್ ಮಾಡ್ತೀನಿ ಎಂದರು.

 

 

Related